ಅಣ್ಣಾ ವಿರೋಧ ಲೆಕ್ಕಕ್ಕಿಲ್ಲ ಲೋಕಪಾಲ ಮಂಡನೆಗೆ ಸಜ್ಜು

ವಿಪಕ್ಷಗಳು ಹಾಗೂ ಭ್ರಷ್ಟಾಚರ ವಿರೋಧಿ ಹೋರಾಟಗಾರರ ಪ್ರತಿಭಟನೆ ನಡುವೆ ಆತುರಾತುರವಾಗಿ ಯುಪಿಎ ಸರ್ಕಾರ ಬಹುನಿರೀಕ್ಷಿತ ಲೋಕಪಾಲ ಮಸೂದೆ ಮಂಡನೆ ಮಾಡಲು ಸಿದ್ಧತೆ ನಡೆಸಿದೆ.
ಚಿದಂಬರಂ ಉಳಿಸಲು ಯತ್ನ: ಸಿಬಿಐ ಅನ್ನು ಹೊರಗಿಟ್ಟು ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸಲು ಯುಪಿಎ ಯತ್ನಿಸುತ್ತಿದೆ. ಸಿಬಿಐ ಲೋಕಪಾಲ ವ್ಯಾಪ್ತಿಗೆ ಬಂದರೆ ಗೃಹ ಸಚಿವ ಪಿ. ಚಿದಂಬರಂ ಜೈಲಿಗೆ ಹೋಗುತ್ತಾರೆ. ಚಿದಂಬರಂ ಸೇರಿದಂತೆ ಭ್ರಷ್ಟರನ್ನು ಉಳಿಸಲು ಯುಪಿಎ ತಂತ್ರ ಹೂಡಿದೆ ಎಂದು ಅಣ್ಣಾ ಹಜಾರೆ ಗುಡುಗಿದ್ದಾರೆ.
'ಜನ ಲೋಕಪಾಲ ಕರಡಿನಲ್ಲಿ ಉಲ್ಲೇಖಿಸಿರುವ ಕೆಲವು ಸಲಹೆಗಳನ್ನು ಒಪ್ಪಿಕೊಳ್ಳಲು ಸರ್ಕಾರಕ್ಕೆ ಪ್ರತಿಷ್ಠೆ ಅಡ್ಡಬರುತ್ತಿದೆ' ಸರ್ಕಾರದ ಲೋಕಪಾಲ ಒಪ್ಪಲು ಸಾಧ್ಯವಿಲ್ಲ ಎಂದು ಅಣ್ಣಾ ತಂಡದ ಸದಸ್ಯ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಅಣ್ಣಾ ಹಜಾರೆ ಲೋಕಪಾಲ ವಿರೋಧಿಸಿ ಡಿ.27 ರಂದು ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದು, ಡಿ.30ರಂದು ಜೈಲು ಭರೋಗೆ ಕರೆ ನೀಡಿದ್ದಾರೆ.












Click it and Unblock the Notifications