'ಶೋಭಾ ಕಿ ಜವಾನಿ' ಗುನುಗಿದ ಶಾಸಕ ರೋಶನ್ ಬೇಗ್
ಬೆಂಗಳೂರು,
ಡಿ. 21: ಮೊನಚು ಮಾತಿನ ಕಾಂಗ್ರೆಸ್ ಶಾಸಕ ರೋಶನ್ ಬೇಗ್ ಮತ್ತೆ ಕಿವಿಗೆ ಮಾತು ಹೇಳಿದ್ದಾರೆ.ಗ್ರಾಮೀಣ ಭಾಗದಲ್ಲಿ ಮಹಿಳೆಯರ ಸಮಸ್ಯೆಗಳು ಸಾಕಷ್ಟಿದ್ದರೂ ಈ ಬಗ್ಗೆ ಮಾಧ್ಯಮಗಳು ಗಮನಹರಿಸುತ್ತಿಲ್ಲ. ಬದಲಿಗೆ ಶೀಲಾ ಕಿ ಜವಾನಿ, ಶೋಭಾ ಕಿ ಜವಾನಿ ಎಂದು ಜಪಿಸುತ್ತಿವೆ' ಎಂದು ಒಂದೇ ಏಟಿಗೆ ಎರಡು ಹಕ್ಕಿಯನ್ನು ಹೊಡೆದಿದ್ದಾರೆ. id="toptextpromo">
ಸಂದರ್ಭ:
ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರ ಮತ್ತು ಎನ್ಎಂಕೆಆರ್ ವಿ ಕಾಲೇಜಿನ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ 'ಮಹಿಳೆಯರನ್ನು ಬಿಂಬಿಸುವಲ್ಲಿ ಮಾಧ್ಯಮಗಳ ಪಾತ್ರ, ಹೊಣೆಗಾರಿಕೆ' ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. id='are-slot-1' class='oiad oi-axt oiadv'> id='top-searched-articles'>ಇದೇ
ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸದಾನಂದ ಗೌಡ ಅವರು 'ಮಾಧ್ಯಮಗಳ ನಡುವಿನ ವಿಪರೀತ ಪೈಪೋಟೊಯಿಂದಾಗಿ ಅಶ್ಲೀಲ, ಅಪರಾಧ ಸುದ್ದಿಗಳನ್ನು ವೈಭವೀಕರಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳತ್ತ ವೀಕ್ಷಕರು ವಾಲಬಾರದು. ಶೋಷಣೆಗೆ ಒಳಗಾದವರು ಅದರ ವಿರುದ್ಧ ಪ್ರತಿಭಟಿಸಬೇಕು' ಎಂದು ಕರೆ ನೀಡಿದರು.











Click it and Unblock the Notifications