HAL ವಿಶ್ವನಾಥರ Jaguar ವೇಗ ಹೀಗಿದೆ ನೋಡಿ!

yelahanka-mla-vishwanath-political-rise
ಬೆಂಗಳೂರು, ಡಿ. 20: ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ತನ್ನ ರಾಜಕೀಯ ಗುರುವನ್ನೇ ಮೀರಿಸುವಷ್ಟು ಬೆಳೆದಿರುವುದು ನೋಡಿದರೆ 'ಯಲಾ ಇವನಾ!' ಅನ್ನಿಸದಿರದು.

ನೋಡಿ. 1985ರಲ್ಲಿ ಈತ HALನಲ್ಲಿ flight control technician ಆಗಿದ್ದವ. ಆನಂತರ HAL Union President and Chief Convenor ಸಹ ಆದರು. ಬಹುಶಃ HALನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಈತನ ರಾಜಕೀಯ ಆಸೆ ಗರಿಗೆದರಿರಬೇಕು. ಅಂದಹಾಗೆ ಇವರ ತಂದೆ ಪಕ್ಕಾ ಕಾಂಗ್ರೆಸ್ಸಿಗರು. (ಮುಂದಿನ ಲೇಖನಗಳಲ್ಲಿ ಆ ಬಗ್ಗೆ ವಿವರವಿದೆ).

ಬರೀ ವಿಮಾನದಲ್ಲಿ ಕೆಲಸ ಮಾಡಿಕೊಂಡಿದ್ದರೆ ಸಾಲದು ಎಂದು ಎಣಿಸಿದ ಈತ ವಿಮಾನ ನಿಲ್ದಾಣದ ಸಮೀಪವೇ 65, ಮತ್ತೊಮ್ಮೆ ಹೇಳುವೆ ಕೇವಲ 65 ಎಕರೆ ಭೂಮಿಯನ್ನು ಹೊಂದಿದ್ದಾರೆ ಎನ್ನಲಾಗಿದೆ. ಈ ವಿಮಾನ ನಿಲ್ದಾಣದ ಬಳಿ ಭೂಮಿ ಬೆಲೆ ಹೇಗಿದೆ ಅಂದರೆ ಇಲ್ಲಿನ ನೆಲ ಬಿಟ್ಟು ಹಾರುವ ವಿಮಾನಗಳು ಮೇಲಕ್ಕೆ ಹಾರುತ್ತಾ ಹಾರುತ್ತಾ ಆ ಭೂಮಿಯ ಬೆಲೆಯನ್ನೂ ಗಗನಕ್ಕೆ ತಲುಪಿಸಿ ಬರುತ್ತಿವೆ.

ಅಂತಹ ದುಬಾರಿ ಭೂಮಿಯ ಒಡೆಯನಾದ ವಿಶ್ವನಾಥ ಯಾವುದೇ ಎಗ್ಗು ಸಿಗ್ಗಿಲ್ಲದೆ ರಾಜಕೀಯ ಆಶ್ರಯದಲ್ಲಿ ಇಂತಹ ಅಕ್ರಮ ಆಸ್ತಿ ಹೊಂದಿದ್ದಾರೆ. ಜತೆಗೆ ಪತ್ನಿಯನ್ನೂ ರಾಜಕೀಯವಾಗಿ ಮೇಲಕ್ಕೆ ತಂದಿದ್ದಾರೆ. ಪತ್ನಿ ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾರೆ. ಯಲಹಂಕ ಭಾಗದಲ್ಲಿ ವಿಶ್ವನಾಥ್ ದಂಪತಿ ಕಾಂಗ್ರೆಸ್ ಅನ್ನು ಮಣ್ಣು ಮುಕ್ಕಿಸಿದ್ದಾರೆ. ಈ ದಂಪತಿಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. (ಚಿತ್ರ ನೋಡಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+