ಎನ್ ಡಿಎ ತೆಕ್ಕೆಗೆ ಬಿದ್ದ ಜನತಾ ಪಾರ್ಟಿ ಸ್ವಾಮಿ

Subramanian Swamy to Join NDA
ನವದೆಹಲಿ: 2ಜಿ ಹಗರಣದಲ್ಲಿ ಯುಪಿಎ ಸರ್ಕಾರಕ್ಕೆ ಸಿಂಹಸ್ವಪ್ನವಾಗಿ ಕಾಡುತ್ತಿರುವಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯ ಸ್ವಾಮಿ ಅವರು ಎನ್‌ಡಿಎ ಸೇರುವ ಸಾಧ್ಯತೆ ನಿಚ್ಚಳವಾಗಿದೆ.

'ನಾನು ಹಿಂದಿನಿಂದಲೂ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿದ್ದೇನೆ. ಎನ್‌ಡಿಎ ಸೇರ್ಪಡೆ ಕುರಿತು ಗಡ್ಕರಿ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಎನ್‌ಡಿಎ ಸೇರ್ಪಡೆಗೆ ಯಾವುದೇ ಷರತ್ತು ಹಾಕಲಾಗಿಲ್ಲ' ಎಂದು ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.

ಗಡ್ಕರಿ ಅವರು ಈ ಬಗ್ಗೆ ಪಕ್ಷದ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದ್ದು, 2012ರಲ್ಲಿ ಸುಬ್ರಮಣ್ಯ ಸ್ವಾಮಿ ಎನ್ ಡಿಎ ನಾಯಕರಾಗುವ ಲಕ್ಷಣಗಳು ಕಂಡು ಬಂದಿದೆ.

ಜನತಾ ಪಕ್ಷ ಸ್ಥಾಪಕ ಅಧ್ಯಕ್ಷರಾಗಿ 1990ರಲ್ಲಿ ಸುಬ್ರಮಣ್ಯ ಸ್ವಾಮಿ ಅಧಿಕಾರ ವಹಿಸಿಕೊಂಡರು. 1974 ರಿಂದ 1999 ರ ಅವಧಿಯಲ್ಲಿ ಐದು ಬಾರಿ ಸಂಸದರಾಗಿ ಚುನಾಯಿತರಾಗಿದ್ದಾರೆ. 2004ರಲ್ಲಿ ರಾಷ್ಟ್ರೀಯ ಸ್ವಾಭಿಮಾನ್ ಮಂಚ್ ಸ್ಥಾಪಿಸಿ ಯುಪಿಎ ಸರ್ಕಾರದ ನೀತಿಗಳ ವಿರುದ್ಧ ದನಿ ಎತ್ತಿದ್ದರು. ಪ್ರಸ್ತುತ ಭ್ರಷ್ಟಾಚಾರ ವಿರುದ್ಧ ಹೋರಾಟದಲ್ಲಿ ನಿರತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+