ಕೋಡಿಮಠದ ಭವಿಷ್ಯವಾಣಿ ಸದಾನಂದರ ಗೆಲುವು ಖಚಿತ

ಈ ಮಧ್ಯೆ, ಸದ್ಯಕ್ಕೆ ಸದಾನಂದಗೌಡರೇ ಮುಖ್ಯಮಂತ್ರಿ. ಆದರೆ ಆ ಮುಂದಕ್ಕೆ ಅವರು ಮುಂದುವರಿಯುತ್ತಾರೋ ಇಲ್ಲವೋ ಎಂಬಂತೆ ದೀಪವನ್ನು ಗಾಳಿಗೊಡ್ಡಿದ್ದಾರೆ. ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಈಶ್ವರಪ್ಪ ಮಠಕ್ಕೆ ಭೇಟಿ ನೀಡಿ ರಾಜಕೀಯ ಭವಿಷ್ಯ ಕೇಳಿದ ನಂತರ ರಾಜ್ಯದ ರಾಜಕಾರಣಿಗಳ ಗಮನ ಈಗ ಕೋಡಿಮಠದತ್ತ ತಿರುಗಿದೆ. ಜನ ಕುತೂಹಲದಿಂದ ನೋಡುತ್ತಿದ್ದಾರೆ.
'ಮುಖ್ಯಮಂತ್ರಿ ಸದಾನಂದ ಗೌಡರು ಡಿ. 22 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜಯ ಗಳಿಸುವುದಕ್ಕೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಆನಂತರದ ದಿನಗಳಲ್ಲಿ ಅವರು ರಾಜಕೀಯ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ' ಎಂಬುದು ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಭವಿಷ್ಯವಾಣಿ.
'ಸದಾನಂದ ಗೌಡರು ಉತ್ತಮ ರಾಜಕಾರಣಿ. ಅವರ ಒಳ್ಳೆಯತನವೇ ಅವರಿಗೆ ಉನ್ನತ ಸ್ಥಾನ ದೊರಕಿಸಿಕೊಟ್ಟಿದೆ. ಆ ಒಳ್ಳೆಯತನದಿಂದಲೇ ಈಗ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಲು ನೆರವಾಗುತ್ತದೆ' ಎಂದಿದ್ದಾರೆ.












Click it and Unblock the Notifications