ಪಕ್ಷಾಧ್ಯಕ್ಷ ಒಲ್ಲೆ; ಕೊಟ್ರೆ ಸಿಎಂ ಪೋಸ್ಟೇ ಕೊಡಿ: ಯಡ್ಡಿ

'ಈಗಿನ ಪರಿಸ್ಥಿತಿಯನ್ನು ಮೊನ್ನೆ ದಿಲ್ಲಿ ಭೇಟಿ ಸಂದರ್ಭದಲ್ಲಿ ವರಿಷ್ಠರಿಗೆ ವಿವರಿಸಿ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷತೆ ಬೇಡ ಅಂತಲೂ ಹೇಳಿದ್ದೇನೆ. ಸರಕಾರದಲ್ಲಿ ಮುಖ್ಯಸ್ಥನ ಸ್ಥಾನ ಕೊಟ್ಟರೆ ತೆಗೆದುಕೊಳ್ಳುತ್ತೇನೆ' ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
'ನಾನೀಗ ಶಿಕಾರಿಪುರದ ಒಬ್ಬ ಸಾಮಾನ್ಯ ಶಾಸಕ ಅಷ್ಟೇ. ಯಾವುದೇ ಕಾರಣಕ್ಕೂ ಬಿಜೆಪಿ ತೊರೆದು ಹೋಗಲಾರೆ. ನಾನು ಕಟ್ಟಿ ಬೆಳೆಸಿದ ಪಕ್ಷ, ಇದನ್ನು ಬಿಡಲಾರೆ' ಎಂದು ಹೇಳಿದರು.
'ಕನಸಿನಲ್ಲಿಯೂ ಬೇರೆ ಪಕ್ಷ ಸೇರಲಾರೆ. ಇನ್ನು, ಹೊಸ ಪಕ್ಷ ಸ್ಥಾಪನೆ ಆಲೋಚನೆಯೂ ಇಲ್ಲ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಉಳಿಗಾಲವಿಲ್ಲ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಲಿದೆ. 22 ಸಂಸದರೂ ಆರಿಸಿ ಬರುತ್ತಾರೆ' ಎಂದು ಅವರು ಘೋಷಿಸಿದರು.












Click it and Unblock the Notifications