ಯಡ್ಡಿಗೆ ಸಿಎಂ ಪಟ್ಟ; ಚೆಂಡು ಕೇಂದ್ರ ವರಿಷ್ಠರ ಕೈಯಲ್ಲಿ
ಚನ್ನರಾಯಪಟ್ಟಣ,
ಡಿ. 19: ರಾಜ್ಯದ ಸಿಎಂ ಪಟ್ಟದ ಚೆಂಡು ಈಗ ಕೇಂದ್ರದ ನಾಯಕರ ಕೈಯಲ್ಲಿದೆ. ಅದನ್ನು ಏನು ಮಾಡುತ್ತಾರೆ ಕಾದು ನೋಡಬೇಕು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಬಿಜಿ ಪುಟ್ಟಸ್ವಾಮಿ ಹೇಳಿದ್ದಾರೆ. id="toptextpromo">ಇದೇ
ವೇಳೆ, ಕಾಡಿನ ರಾಜ ಸಿಂಹ. ಇದೇ ರೀತಿ ಬಿಜೆಪಿಯಲ್ಲಿ ಯಡಿಯೂರಪ್ಪ ಸಿಂಹ. ಹೀಗಾಗಿ ರಾಜ್ಯದ ಅಧಿಪತಿ ಯಾರು ಎನ್ನುವುದನ್ನು ತಾವೇ ತಿಳಿದುಕೊಳ್ಳಿ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಬಿಜಿ ಪುಟ್ಟಸ್ವಾಮಿ ಮಾರ್ಮಿಕವಾಗಿ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಬಿಜೆಪಿಯಲ್ಲಿ
ಎಲ್ಲವೂ ಸರಿ ಇದೆ. ರಾಜ್ಯಾಧ್ಯಕ್ಷ ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯ ಮಂತ್ರಿ ಸದಾನಂದಗೌಡರು ತುಂಬಾ ಆತ್ಮೀಯರಾಗಿದ್ದಾರೆ. ಪರಿಷತ್ ಚುನಾವಣೆಯಲ್ಲಿ ತಮ್ಮ ಶಾಸಕರ ಜೊತೆಯಲ್ಲಿ ಬೇರೆ ಪಕ್ಷದ ಆರು ಮಂದಿ ಶಾಸಕರು ತಮ್ಮ ಮತವನ್ನು ಸದಾನಂದಗೌಡ ಅವರಿಗೆ ನೀಡಲಿದ್ದಾರೆ ಎಂದೂ ತಿಳಿಸಿದರು.











Click it and Unblock the Notifications