ಭಾರತಕ್ಕೆ ದ್ರೋಹ ಬಗೆಯಲು ದಾವೂದ್ ಹೊಸ ಸಂಚು

42 ವರ್ಷದ ಸುಮೊನ ಮುನ್ಲಾಂಗ್ ನೇತೃತ್ವದ ಯುನೈಟೆಡ್ ಪೀಪಲ್ಸ್ ಡೆಮ್ರೋಕಾಟಿಕ್ ಫ್ರಂಟ್(UPDF)ಎಂಬ ಬಂಡಾಯಗಾರರ ತಂಡದ ಜೊತೆ ದಾವೂದ್ ನಿಕಟ ಸಂಪರ್ಕ ಹೊಂದಿದ್ದಾನೆ.
ಉಲ್ಫಾ ಉಗ್ರರ ಹತೋಟಿಯಲ್ಲಿರುವ ಲೋಹಿತ್ ಹಾಗೂ ಚಾಂಗ್ಲಾಲ್ ಜಿಲ್ಲೆಗಳ ಪ್ರತ್ಯೇಕಿಸಲು ಎದ್ದಿರುವ ಕೂಗಿಗೆ ದಾವೂದ್ ದನಿಗೂಡಿಸುವ ಸಾಧ್ಯತೆಯಿದೆ. ಚೀನಾ ಹಾಗೂ ಬರ್ಮಾ ದೇಶದ ಗಡಿ ಭಾಗದ ಒಂದೊಂದೆ ಗ್ರಾಮಗಳನ್ನು ಹತೋಟಿಗೆ ತೆಗೆದುಕೊಳ್ಳಲು ಹುನ್ನಾರ ನಡೆದಿದೆ.
ದಾವೂದ್ ಗೆ ಏನು ಲಾಭ: ದಾವೂದ್ ತನ್ನ ಶಾರ್ಪ್ ಶೂಟರ್ ಗಳಿಗೆ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಲು ನೀಡಿದ್ದಾನೆ.
ಅರುಣಾಚಲದಲ್ಲಿ ಉಗ್ರರ ಗುಂಪನ್ನು ದಾವೂದ್ ಪಡೆ ಮುನ್ನಡೆಸುತ್ತಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ಲೋಹಿತ್ ಜಿಲ್ಲಾ ಡಿಸಿಪಿ ಆರ್ ಕೆ ಶರ್ಮ ಹೇಳಿದ್ದಾರೆ.
ಚೀನಾ ಹಾಗೂ ದಾವೂದ್ ಸಂಪರ್ಕ ಇನ್ನೂ ನಿಗೂಢವಾಗಿದ್ದು, ಶಸ್ತ್ರಾಸ್ತ್ರ ಖರೀದಿಗೂ ಮಿಗಿಲಾದ ಸಂಬಂಧ ಏರ್ಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಗುಪ್ತಚರ ಮಾಹಿತಿ ಹೇಳುತ್ತಿದೆ.












Click it and Unblock the Notifications