ವಿಧ್ವಂಸಕ ಕೃತ್ಯ ಸಂಚು ರೂಪಿಸಿದ್ದ ಉಗ್ರರಿಗೆ ಶಿಕ್ಷೆ

ಮೆಹಬೂಬ್ ಇಬ್ರಾಹಿಂ, ಮೆಹರುದ್ದಿನ್ ಖಾನ್, ಮಹಮ್ಮದ್ ರಸಾಫುಲ್ಲಾ, ಅಫ್ಜಲ್ ಪಾಷಾ, ನಾಸಿರುದ್ದಿನ್ ಆರೋಪಿಗಳೆಂದು ನ್ಯಾಯಾಲಯ ಶಿಕ್ಷೆಗೆ ಗುರಿಪಡಿಸಿದೆ. ಏನೇ ಆರೋಪಿಯಾಗಿದ್ದ ಚಾಂದ್ ಪಾಷಾನನ್ನು ನಿರ್ದೋಷಿ ಎಂದು ನ್ಯಾಯಾಧೀಶ ರೇವಣಕರ್ ಅವರು ಖುಲಾಸೆ ಮಾಡಿದ್ದಾರೆ.
ಅವರ ವಿರುದ್ಧ ರಾಷ್ಟ್ರದ್ರೋಹವೆಸಗಿದ, ದೇಶದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ನಡೆಸಿದ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪಗಳನ್ನು ಹೊರಿಸಲಾಗಿತ್ತು. ಇವರನ್ನು ಬಂಧಿಸಿದಾಗ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.
2005ರ ಡಿಸೆಂಬರ್ 28ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆಡಿಟೋರಿಯಂ ಆವರಣದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ದೆಹಲಿ ಐಐಟಿಯ ಪ್ರೊಫೆಸರ್ ಮುನಿಶ್ ಚಂದ್ರ ಪುರಿ ಅವರು ಹತ್ಯೆಯಾಗಿ ನಾಲ್ವರು ಗಾಯಗೊಂಡಿದ್ದರು. ಈ ಘಟನೆಯ ತನಿಖೆ ನಡೆಸುತ್ತಿದ್ದಾಗ ಈ ಏಳು ಉಗ್ರರನ್ನು ಬಂಧಿಸಲಾಗಿತ್ತು. ಆದರೆ, ಇವರಿಗೂ ಐಐಎಸ್ಸಿ ದಾಳಿಗೂ ಸಂಬಂಧವಿಲ್ಲ ಎಂದು ದೃಢವಾಗಿತ್ತು.












Click it and Unblock the Notifications