ಯಡ್ಡಿಗೆ ಸಿಎಂ ಸೀಟಿಲ್ಲ, ಈಶ್ವರಪ್ಪನ ಸೀಟು ಕೊಡ್ತೀವಿ: ಬಿಜೆಪಿ

ಡಿ.16ರೊಳಗೆ ಏನಾದರೂ ಶುಭ ಸುದ್ದಿ ಬಂದರೂ ಬರಬಹುದು. ಆದರೂ ಅದು ಸಂಕ್ರಾಂತಿ ನಂತರ ನಿಮ್ಮ ಕೈ ಸೇರಲಿದೆ ಎಂಬ ಮಾತು ನಿಜವಾಗುವ ಲಕ್ಷಣಗಳು ಕಂಡು ಬಂದಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನದ ಬದಲಿಗೆ ಪಕ್ಷದ ರಾಜ್ಯಾಧ್ಯಕ್ಷ ಪಟ್ಟ ನೀಡಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ. ಮುಂದಿ ಫೆಬ್ರವರಿ ತಿಂಗಳಿನಲ್ಲಿ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡುವ ಬಗ್ಗೆ ನಿತಿನ್ ಗಡ್ಕರಿ ಮಾತಾಡಿದ್ದಾರೆ.
ಯಡಿಯೂರಪ್ಪ ಅವರಿಗೆ 73 ಶಾಸಕರು, 15 ಸಂಸದರು ಹಾಗೂ 3 ರಾಜ್ಯ ಸಭಾ ಸದಸ್ಯರ ಬೆಂಬಲ ಪತ್ರ ಕಂಡು ದಂಗಾಗಿದ್ದ ಬಿಜೆಪಿ ಹೈಕಮಾಂಡ್ ಈಗ ಸುಧಾರಿಸಿಕೊಂಡಿದೆ.
ಅಡ್ವಾಣಿ ಅವರ ಮನವೊಲಿಸಿ ಫೆಬ್ರವರಿಗೆ ಕೆಎಸ್ ಈಶ್ವರಪ್ಪ ಅವರ ಸ್ಥಾನದಲ್ಲಿ ಯಡಿಯೂರಪ್ಪ ಅವರನ್ನು ಕೂರಿಸಲು ನಿತಿನ್ ಗಡ್ಕರಿ ಸಿದ್ಧತೆ ನಡೆಸಿದ್ದಾರೆ.
ಇಲ್ಲದಿದ್ದರೆ ಏನಾಗುತ್ತದೆ..?












Click it and Unblock the Notifications