ಭಿಕ್ಷೆ ಬೇಡ, ಪಕ್ಷ ಕಟ್ಟೋಣ ಬನ್ನಿ: ಯಡ್ಡಿ ಬೆಂಬಲಿಗರು

ಐಡಿಯಾ ಹಳೆಯದಾದರೂ ಈಗ ಕಾಲ ಕೂಡಿ ಬಂದಿದೆ ಎನ್ನಬಹುದು. ಸಿಎಂ ಸ್ಥಾನ, ರಾಜ್ಯಾಧ್ಯಕ್ಷ ಸ್ಥಾನ ನೀಡಲು ಮೀನಾ ಮೇಷ ಎನಿಸುತ್ತಾ ಭಿಕ್ಷೆ ನೀಡುವಂತೆ ವರ್ತಿಸುತ್ತಿರುವ ಬಿಜೆಪಿ ಸಹವಾಸ ಸಾಕು. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಹೊಸ ಪಕ್ಷ ಕಟ್ಟಿ ಎಂದು ಸಂಸದ ಬಿವೈ ರಾಘವೇಂದ್ರ ಕರೆದಿದ್ದ ಚಹಾಕೂಟದಲ್ಲಿ ಮಾತುಗಳು ಕೇಳಿ ಬಂದಿದೆ.
ಇತ್ತ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಕೂಡಾ ಯಡಿಯೂರಪ್ಪನವರಿಗೆ ಎನ್‌ಸಿಪಿ ತನ್ನ ಬಾಗಿಲುಗಳನ್ನು ಮುಚ್ಚಿ, ಕಳಂಕಿತರಿಗ ಸ್ಥಾನವಿಲ್ಲ ಎಂದಿದ್ದಾರೆ.
ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿರುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಎನ್‌ಸಿಪಿ ನಾಯಕ ದೇವಿಪ್ರಸಾದ್ ತ್ರಿಪಾಠಿ ಹೇಳಿದ್ದಾರೆ.
ಇದರಿಂದ ಸಹಜವಾಗಿ ಕೋಪಗೊಂಡ ಯಡಿಯೂರಪ್ಪ ನಾನು ಮಾಡಿದ ಭ್ರಷ್ಟಾಚಾರಕ್ಕಿಂತ ಕಳಕಿಂತರು ಈ ದೇಶದಲ್ಲಿ ಇನ್ನೂ ಅಧಿಕಾರದಲ್ಲಿದ್ದಾರೆ ಎಂಬುದನ್ನು ಆ ಪಕ್ಷ ಮರೆತ ಹಾಗೆ ಇದೆ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದಾರೆ.
ಯಡಿಯೂರಪ್ಪ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿದೆ. ಆದರೆ, ಮುಖ್ಯಮಂತ್ರಿ ಪಟ್ಟಕ್ಕೆ ಹಾತೊರೆಯುತ್ತಿರುವ ಯಡಿಯೂರಪ್ಪ ಅವರ ದಾಹಕ್ಕೆ ಅವರ ಬೆಂಬಲಿಗರು ಹೊಸ ಪಕ್ಷ ಕಟ್ಟುವ ಸಲಹೆಯನ್ನು ಹರಿಯಬಿಟ್ಟಿದ್ದಾರೆ. ಎಂಎಲ್ಸಿ ಚುನಾವಣೆ ತನಕ ತಡೆದುಕೊಳ್ಳುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.












Click it and Unblock the Notifications