ಜೋಗೀಶ್ವರಿ ರೇಪ್ ಎಂಎಂಎಸ್ ಸ್ಲಂ ಬಾಯ್ಸ್ ಸೆರೆ

14 ವರ್ಷದ ಹುಡುಗಿಯನ್ನು ಆಕೆ ಜೋಪಡಿಯಿಂದ ಎಳೆದೊಯ್ದು, ಸತತವಾಗಿ ರೇಪ್ ಮಾಡಿದ್ದಾರೆ. ನಂತರ ಎಂಎಂಎಸ್ ಚಿತ್ರೀಕರಿಸಿಕೊಂಡು ಮಜಾ ಉಡಾಯಿಸುತ್ತಿದ್ದರು. ಇವರ ವರ್ತನೆಗೆ, ಬೆದರಿಕೆಗೆ ಹೆದರಿದ್ದ ಹುಡುಗಿ ಪೊಲೀಸರಿಗೆ ದೂರು ನೀಡಿರಲಿಲ್ಲ.
ಆದರೆ, ಅನಾಮಿಕ ವ್ಯಕ್ತಿಯಿಂದ ಪೊಲೀಸರಿಗೆ ದೂರು ಸಿಕ್ಕಿತ್ತು. ದೂರು ನೀಡಿದ ವ್ಯಕ್ತಿಗಿಂತ ಅನಾಮಧೇಯರಾದ ಇಬ್ಬರು ಯುವಕರನ್ನು ಹಿಡಿಯಲು ಸಾಕಷ್ಟು ಶ್ರಮಪಡಬೇಕಾಯಿತು ಎಂದು ಸಬ್ ಇನ್ಸ್ ಪೆಕ್ಟರ್ ಎಸ್ ಎ ಪವಾರ್ ಹೇಳಿದ್ದಾರೆ.
ಸ್ಥಳೀಯ ಸ್ಲಮ್ ಜನಗಳ ನೆರವಿನಿಂದ ತಲೆ ಮರೆಸಿಕೊಂಡಿದ್ದ ಯುವಕರು ಯಾವುದೋ ಜ್ಞಾನದಲ್ಲಿ ಮೊಬೈಲ್ ಫೋನ್ ನಿಂದ ಗೆಳೆಯನೊಬ್ಬನಿಗೆ ಕರೆ ಮಾಡಿದ್ದಾರೆ. ಹುಡುಗರ ಹುಡುಕಾಟದಲ್ಲಿದ್ದ ಪೊಲೀಸರು ಈ ಸಣ್ಣ ಸುಳಿವಿನಿಂದ ಹುಡುಗರ ಜಾಡು ಹಿಡಿದು ಬಂಧಿಸಿದ್ದಾರೆ. ಕಿಡ್ನಾಪ್ ಹಾಗೂ ರೇಪ್ ಕೇಸ್ ಹಾಕಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪವಾರ್ ಹೇಳಿದ್ದಾರೆ.












Click it and Unblock the Notifications