ಶಾಸಕ ಸಿಟಿ ರವಿ ಭೂ ಹಗರಣ, ಲೋಕಾಯುಕ್ತಕ್ಕೆ ದೂರು

ಚಿಕ್ಕಮಗಳೂರಿನ ಕೆಎಚ್‌ಬಿ ಕಾಲೋನಿಯ ತೃತೀಯ ಹಂತದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡಿನಿಂದ ಮೂರು ನಿವೇಶನ ಪಡೆದುಕೊಂಡಿರುವ ಅಕ್ರಮದ ಬಗ್ಗೆ ಚಿಕ್ಕಮಗಳೂರು ನಗರ ಪಾಲಿಕೆ ಸದಸ್ಯ ದೇವಿಪ್ರಸಾದ್ ಅವರು ಈ ಮುಂಚೆ ಆರ್ ಟಿಐ ಅರ್ಜಿ ಮೂಲಕ ವಿವರಗಳನ್ನು ಪಡೆದಿದ್ದರು.
ವಿಜಯಪುರದ ಶ್ರೀ ಆಂಜನೇಯ ಶಿಕ್ಷಣ ಟ್ರಸ್ಟ್ ಅಧ್ಯಕ್ಷೆಯಾಗಿರುವ ಪಲ್ಲವಿ ಹೆಸರಿಗೆ ಲೀಸ್ ಕಮ್ ಸೆಲ್ ಕ್ರಯ ಪತ್ರ ನೋಂದಣಿಯಾಗಿದೆ.
ಅಸ್ತಿತ್ವದಲ್ಲಿರದ ಶಿಕ್ಷಣ ಸಂಸ್ಥೆಯೊಂದರ ಅಧ್ಯಕ್ಷೆ ಎಂದು ಹೇಳಿಕೊಂಡಿದ್ದಾರೆ. ಚಿಕ್ಕಮಗಳೂರು ಅಸೆಂಬ್ಲಿ ಕ್ಷೇತ್ರ ಜನಪ್ರತಿನಿಧಿ ಸಿಟಿ ರವಿ ಅವರ ಪತ್ನಿ ಪಲ್ಲವಿ ಹೆಸರಿಗೆ ಮೂರು CA ಸೈಟು ಪರಭಾರೆಯಾಗಿದೆ.
ಸೈಟ್ ನಂಬರ್ 113 ಮತ್ತು 114 (ಕೆಎಚ್‌ಬಿ ಕಾಲೋನಿ ಎಂಐಜಿ 2ನೇ ಸ್ಟೇಜಿನಲ್ಲಿ) ಜಾಗದಲ್ಲೂ ಇದೇ ಉದ್ದೇಶಕ್ಕಾಗಿ ಪ್ರಮಾಣ ಪತ್ರ ನೀಡಿ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಸಿಟಿ ರವಿ ಹಾಗೂ ಅವರ ಪತ್ನಿ ಸೇರಿದಂತೆ 11 ಜನರ ವಿರುದ್ಧ ನೀಡಿರುವ ದೂರಿನ ಪರಿಶೀಲಿಸುತ್ತಿರುವ ನ್ಯಾ.ಸುಧೀಂದ್ರ ರಾವ್ ಅವರು ಲೋಕಾಯುಕ್ತ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ಡಿ.16ರಂದು ಸ್ಪಷ್ಟಪಡಿಸಲಿದೆ.












Click it and Unblock the Notifications