ರಾಹುಲ್ ಗಾಂಧಿ ಅಷ್ಟು ಸುಲಭವಾಗಿ ಪ್ರಧಾನಿ ಆಗಲಾರ: ಅಣ್ಣಾ
ನವದೆಹಲಿ,
ಡಿ. 12: ಕೇವಲ ಒಂದೆರಡು ದಿನ ಗುಡಿಸಲುಗಳಲ್ಲಿ ತಂಗುವ ಮೂಲಕ ಕಾಂಗ್ರೆಸ್ಸಿನ ಅಧಿನಾಯಕ ರಾಹುಲ್ ಗಾಂಧಿಗೆ ಪ್ರಧಾನಿಪಟ್ಟಕ್ಕೆ ಏರಲಾಗದು ಎಂದು ಜಾಗತಿಕ ಚಿಂತಕ, ಭ್ರಷ್ಟಾಚಾರ ವಿರೋಧಿ ಹಿರಿಯಣ್ಣ ಅಣ್ಣಾ ಹಜಾರೆ ಅಭಿಪ್ರಾಯಪಟ್ಟಿದ್ದಾರೆ. id="toptextpromo">ಕಾಂಗ್ರೆಸ್ಸಿನ
ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಕಟುವಾಗಿ ಟೀಕಿಸಿರುವ ಅಣ್ಣಾ ಹಜಾರೆ 'ಆತನ ಬಗ್ಗೆ ವೈಯಕ್ತಿವಾಗಿ ನನಗೇನೂ ಕೆಟ್ಟ ಭಾವ ಇಲ್ಲ. ಆದರೆ ಪಕ್ಷ ಆತನನ್ನು ಭವಿಷ್ಯದ ಪ್ರಧಾನಿಯನ್ನಾಗಿ ಬಿಂಬಿಸುತ್ತಿದೆ. ಆದರೆ ಅಷ್ಟುಸುಲಭವಾಗಿ ಆತನಿಗೆ ಆ ಪಟ್ಟ ದಕ್ಕುವುದಿಲ್ಲ. ಅದಕ್ಕಾಗಿ ಆತ ಬಹಳಷ್ಟು ಶ್ರಮ ಹಾಕಬೇಕಿದೆ' ಎಂದು ಸ್ಪಷ್ಟವಾಗಿ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಗ್ರಾಮೀಣ
ಭಾಗಗಳಿಗೆ ಭೇಟಿ ಕೊಟ್ಟಾಗ ಯುವ ರಾಜಕುಮಾರ ಗ್ರಾಮಸ್ಥರ ಮನೆಗಳಲ್ಲಿ ಒಂದೊಎರಡೋ ರಾತ್ರಿಗಳನ್ನು ಕಳೆಯುತ್ತಾರೆ. ಆದರೆ ಅಷ್ಟಕ್ಕೇ ಆತ ದೊಡ್ಡ ಹುದ್ದೆಯ ಕನಸು ಕಾಣುವುದು ತರವಲ್ಲ. ಜನ ಲೋಕಪಾಲ ಮಸೂದೆ ಹೊಳೆಯಲ್ಲಿ ಹುಳಿ ಹಿಂಡಿದ ಹಾಗಿದೆ. ಇದಕ್ಕೆ ರಾಹುಲ್ ಗಾಂಧಿಯೇ ಕಾರಣ. ಪ್ರಧಾನಿಯೇ ಲಿಖಿತ ರೂಪದಲ್ಲಿ ಭರವಸೆ ನೀಡಿರುವಾಗ ಅದನ್ನು ನಿಷ್ಫಲಗೊಳಿಸಲು ಬೇರೆ ಯಾರಿಂದ ತಾನೆ ಸಾಧ್ಯ? ಅದಕ್ಕೆ ಗಾಂಧಿಯೇ ಕಾರಣ ಎಂದು ಅಣ್ಣಾ ಗರಂ ಆಗಿದ್ದಾರೆ.











Click it and Unblock the Notifications