ನಿಲೇಕಣಿಗೆ ಮುಖಭಂಗ; ಆಧಾರ್ ಪುನಾರಚನೆ?

ಸಾರ್ವಜನಿಕರ ಖಾಸಗಿ ಮಾಹಿತಿ ರಕ್ಷಣೆ ಕಾಯಿದೆ ಇಲ್ಲದಿರುವುದು, ಈ ಮಾಹಿತಿ ಜತೆಗೆ ಭದ್ರತಾ ಲಕ್ಷಣಗಳನ್ನು ಖಾಸಗಿ ಎಜೆನ್ಸಿಗಳು ಬಳಕೆ ಮಾಡಿಕೊಳ್ಳುವುದು ಸೇರಿದಂತೆ ಮಸೂದೆಯಲ್ಲಿ ಅನೇಕ ನ್ಯೂನತೆಗಳಿರುವುದರಿಂದ ತಿರಸ್ಕರಿಸಿರುವುದಾಗಿ ಸ್ಥಾಯಿ ಸಮಿತಿ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.
ಬೊಕ್ಕಸದಿಂದ ಅಪಾರ ಪ್ರಮಾಣದಲ್ಲಿ ಹಣ ವ್ಯಯ ಮಾಡಿ, ನಂಬಲು ಸಾಧ್ಯವಿಲ್ಲದ ತಾಂತ್ರಿಕತೆ ಬಳಕೆ ಮಾಡಿಕೊಂಡು ಸಾರ್ವಜನಿಕರನ್ನು ನೋಂದಣಿ ಮಾಡಿಕೊಳ್ಳುವ ಈ ಮಸೂದೆ ಖಾಸಗಿ ವ್ಯಕ್ತಿಗಳ ಮಾಹಿತಿ ರಕ್ಷಣೆ ಮಾಡುವಲ್ಲಿ ವಿಫಲವಾಗಿದೆ ಎಂದೂ ಕಾರಣ ನೀಡಲಾಗಿದೆ.
ಮಸೂದೆಯನ್ನು ಈಗಿರುವ ಸ್ವರೂಪದಲ್ಲಿಯೇ ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಹಣಕಾಸು ಸಚಿವ ಬಿಜೆಪಿಯ ಯಶವಂತ ಸಿನ್ಹ ಅವರ ನೇತೃತ್ವದ ಸಮಿತಿ ಅಭಿಪ್ರಾಯಪಟ್ಟಿದೆ. ಜತೆಗೆ ಮಸೂದೆಯಲ್ಲಿ ಅನೇಕ ಬದಲಾವಣೆಗಳನ್ನು ಮಾಡುವಂತೆಯೂ ಶಿಫಾರಸು ಮಾಡಿ, ಸಂಸತ್‌ಗೆ ಹಿಂತಿರುಗಿಸಿದೆ.












Click it and Unblock the Notifications