ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರ ಪಬ್ಬುಗಳಲ್ಲಿ ಮಜಾಮಾಡಲು ಟೆಕ್ಕಿ ಮನೆ ದೋಚಿದರು

By Srinath
|
Google Oneindia Kannada News

students-loot-houses-for-pubs-holiday-kashmir
ಹೈದರಾಬಾದ್, ಡಿ. 9: ಪದವಿ ವ್ಯಾಸಂಗದ ನಾಲ್ವರು ವಿದ್ಯಾರ್ಥಿಗಳು ಕಾಶ್ಮೀರದ ಪಬ್ಬುಗಳಲ್ಲಿ ಮಜಾ ಉಡಾಯಿಸಲು ಟೆಕ್ಕಿ ಮನೆ ಸೇರಿದಂತೆ ಒಂದು ತಿಂಗಳ ಅಂತರದಲ್ಲಿ ನಗರದಲ್ಲಿ ನಾಲ್ಕು ಮನೆಗಳನ್ನು ದೋಚಿದ್ದಾರೆ. ಈ ನಾಲ್ವರೂ ಗುರುವಾರ ಪೊಲೀಸರ ಅತಿಥಿಗಳಾಗಿದ್ದಾರೆ.

ಮೋಜುಮಸ್ತಿಯ ಜೀವನಕ್ಕೆ ಮಾರೊಹೋದ ವಿದ್ಯಾರ್ಥಿಗಳು ಅಂಕಿತ್ ತಿವಾರಿ (ಕುಕ್ಕಟಪಲ್ಲಿಯ ಶ್ರೀ ಚೈತನ್ಯ ಕಾಲೇಜು), ಪ್ರತಾಪ್ ಕುಮಾರ್ (ಬಂಜಾರಾ ಹಿಲ್ಸ್ ಐಐಪಿಎಂನ ಎಂಬಿಎ), ಸಂತೋಷ್ ಕುಮಾರ್ (ಸಿಕಂದರಾಬಾದಿನ ವೆಸ್ಲೆ ಕಾಲೇಜು) ಮತ್ತು ಸೌರಬ್ ಕುಮಾರ್ (ದುಂಡಿಗಲ್ ಎಸ್ಎಸ್ಐಟಿ ಬಿಟೆಕ್ ವಿದ್ಯಾರ್ಥಿ).

ಈ ರೀತಿ ಮನೆಗಳನ್ನು ದೋಚಿ ಕೂಡಿಹಾಕಿದ ಹಣದಿಂದ ಕಾಶ್ಮೀರ, ಉತ್ತರ ಭಾರತದ ಪ್ರಸಿದ್ಧ ಸ್ಥಳಗಳಿಗೆ ಮೋಜಿನ ಪ್ರವಾಸ ಕೈಗೊಂಡು ಮನದಾಸೆ ತೀರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಳಿದುಳಿದ ಕದ್ದ ದುಡ್ಡಿನಿಂದ ನಗರದ ಬಾರು, ಪಬ್ಬುಗಳಿಗೂ ನಿರಂತರವಾಗಿ ಭೇಟಿ ನೀಡಿದ್ದಾರೆ.

ಕೋಮಪಲ್ಲಿಯಲ್ಲಿರುವ ಜೈಭೇರಿ ಕಾಲನಿಯಲ್ಲಿರುವ ಸಾಫ್ಟ್ ವೇರ್ ಇಂಜಿನಿಯರ್ ಯೋಗೇಶ್ ಪಟೇಲ್ ಮನೆಗೆ ಕನ್ನ ಹಾಕಿದಾಗ ಈ ಮೋಜುಗಾರ ಕಳ್ಳರ ಬಗ್ಗೆ ಸುಳಿವು ಸಿಕ್ಕಿದೆ. ಯೋಗೇಶ್ ಪಟೇಲ್ ಮನೆಯಿಂದ 17 ತೊಲ ಬಂಗಾರದ ಆಭರಣಗಳು, ಎರಡು ಕ್ಯಾಮರಾಗಳನ್ನು ಇವರು ಕದ್ದಿದ್ದರು. ಅಂಕಿತನನ್ನು ಮೊದಲು ಹಿಡಿದ ಪೊಲೀಸರು ಅವನನ್ನು ಚೆನ್ನಾಗಿ ತದಕಿದಾಗ ಉಳಿದವರ ಬಗ್ಗೆ ಅವನು ಬಾಯ್ಬಿಟ್ಟಿದ್ದಾನೆ. ಬಂಧಿತರಿಂದ 7 ಲಕ್ಷ ರುಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

English summary
A gang of four students, who committed three house burglaries in one month, was caught by the Cyberabad police on Thursday. From the proceeds of the stolen property, the students went on holiay trips to Kashmir and north-eastern states. They were also regular visitors at pubs and bars in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X