ಹದಿನಾರರ ಬಾಲಕಿ ಮೇಲೆ ಬಾಯ್ ಫ್ರೆಂಡ್ ಅತ್ಯಾಚಾರ
ನವದೆಹಲಿ,
ಡಿ. 9: ಹದಿನಾರು ವರ್ಷದ ಬಾಲಕಿಯ ಮೇಲೆ ಅವಳ ಬಾಯ್ ಫ್ರೆಂಡ್ ಇನ್ನಿಬ್ಬರ ಜತೆಗೂಡಿ ಅತ್ಯಾಚಾರ ಮಾಡಿರುವ ಘಟನೆ ಪೂರ್ವ ದೆಹಲಿಯ ಗಾಜಿಯಾಬಾದಿನಲ್ಲಿ ಮೊನ್ನೆ ನಡೆದಿದೆ. id="toptextpromo">10
ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯನ್ನು 28 ವರ್ಷದ ಅವಳ ಬಾಯ್ ಫ್ರೆಂಡ್ ಪುಸಲಾಯಿಸಿ, ಬೈಕಿನಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತನ್ನ ಇಬ್ಬರು ಸ್ನೇಹಿತರ ಜತೆಗೂಡಿ ಈ ಕುಕೃತ್ಯ ಎಸಗಿದ್ದಾನೆ. id='are-slot-1' class='oiad oi-axt oiadv'> id='top-searched-articles'>ತನ್ನ
ಬೈಕಿನಲ್ಲಿ ಬಾಲಕಿಯನ್ನು ಸ್ನೇಹಿತರ ಮನೆಗೆ ಕರೆದೊಯ್ದ ಬಾಯ್ ಫ್ರೆಂಡ್ ಅಲ್ಲಿ ಅವಳನ್ನು ಕೂಡಿಹಾಕಿ ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಮಾಡಿದ್ದಾರೆ. ಘಟನೆಯ ಬಳಿಕ ಬಾಲಕಿ ಪಾರಾಗಿ, ಗಾಜಿಪುರ ಮುರ್ಗಾ ಮಂಡಿ ಬಳಿ ಬಂದು ಸ್ಥಳೀಯರಿಂದ ರಕ್ಷಿಸಲ್ಪಟ್ಟಿದ್ದಾಳೆ. ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ಬಾಯ್ ಫ್ರೆಂಡ್ ನನ್ನು ಬಂಧಿಸಿದ್ದಾರೆ.











Click it and Unblock the Notifications