ಉಗ್ರರ ಜೊತೆ ನಂಟು ಅಲ್ಲಗೆಳೆದ ತುಮಕೂರು ಕಾಂಗ್ರೆಸ್ಸಿಗ

Bangalore Blast case
ತುಮಕೂರು, ಡಿ.9: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಬಾಂಬ್ ಸ್ಫೋಟದ ಸಂಚು ರೂಪಿಸಿದ ಉಗ್ರರಿಗೂ ತುಮಕೂರಿನ ಮಾಜಿ ಶಾಸಕರೊಬ್ಬರಿಗೂ ಸಂಪರ್ಕ ಇದೆ ಎಂದು ಪೊಲೀಸರು ಮಾಡಿರುವ ಆರೋಪವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್.ಶಫಿ ಅಹ್ಮದ್ ಅಲ್ಲಗೆಳೆದಿದ್ದಾರೆ.

ನಾನು ನಗರಸಭಾ ಸದಸ್ಯನಾಗುವುದಕ್ಕಿಂತಲೂ ಮೊದಲು ಎನ್‌ಎಸ್‌ಯುಐನ ಸಕ್ರೀಯ ಕಾರ್ಯಕರ್ತನಾಗಿದ್ದೆ. ಮಾಜಿ ಶಾಸಕ ಲಕ್ಕಪ್ಪ, ಹಿರಿಯ ಮುಖಂಡ ಗಂಗಾಧರ್‌ರ ಮಾರ್ಗದರ್ಶನದಂತೆ ಜಾತ್ಯತೀತವಾಗಿ ಬದುಕುತ್ತಿದ್ದೇನೆ. ನಾನಾಗಲಿ ಮತ್ತು ನಮ್ಮ ಕುಟುಂಬವಾಗಲಿ ಇಂತಹ ದೇಶದ್ರೋಹಿ ಕಾರ್ಯದಲ್ಲಿ ಭಾಗಿಯಾಗಿಲ್ಲ. ನಮ್ಮ ವಿರುದ್ಧ ಯಾವುದೇ ತನಿಖೆ ನಡೆದರೂ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಶಫಿ ಹೇಳಿದ್ದಾರೆ.

ರಾಜಕೀಯ ದ್ವೇಷ ಕಾರಣ?: ವಿಧಾನಸಭೆ, ನಗರಸಭೆಯ ಚುನಾವಣೆಗಳ ಸಂದರ್ಭದಲ್ಲಿ ಬೆದರಿಕೆ ಕರೆಗಳು ಬರುತ್ತಿದ್ದವು. ನಮ್ಮ ಕುಟುಂಬ ರಾಜಕೀಯವಾಗಿ ಬೆಳೆಯದಂತೆ ತಡೆಯಲು ಬಿಜೆಪಿ, ಹಿಂದೂ ಜಾಗರಣಾ ವೇದಿಕೆ ಸದಸ್ಯರು ಅನೇಕ ತಂತ್ರ ಹೂಡಿದ್ದಾರೆ.

ನನ್ನ ವಿರುದ್ಧ ಆರೋಪ ಹೊರೆಸಿ ಸುಳ್ಳು ಸುದ್ದಿ ಪ್ರಕಟಿಸಿರುವ ಪತ್ರಿಕೆ ಹಾಗೂ ಸುಳ್ಳು ಸುದ್ದಿ ಹರಡುತ್ತಿರುವ ಮಾಧ್ಯಮ ಸಂಸ್ಥೆಯ ವಿರುದ್ಧ ಕಾನೂನು ಸಮರ ಕೈಗೊಳ್ಳುತ್ತೇನೆ ಎಂದು ಶಫಿ ಅಹ್ಮದ್ ತಿಳಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದ ಗೃಹ ಸಚಿವರು, ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೂ ಪತ್ರ ಬರೆದು ತಮ್ಮ ಮೇಲೆ ಬರುತ್ತಿರುವ ಸುಳ್ಳು ಆರೋಪಗಳ ಬಗ್ಗೆ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಿ, ಸುಳ್ಳು ಆರೋಪ ಮಾಡುವವರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಪತ್ರ ಕಳುಹಿಸುತ್ತೇನೆ ಎಂದು ಎಚ್ಎಂಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕ, ಕಾಂಗ್ರೆಸ್ ಮುಖಂಡ ಶಫಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+