ಶಿವಮೊಗ್ಗದಿಂದಲೇ ಪ್ರವಾಸ: ಯಡಿಯೂರಪ್ಪಗೆ ರಾಮುಲು ಟಾಂಗ್

sreeramulu-to-embark-on-tour-from-bsy-shimoga
ಬೆಂಗಳೂರು, ಡಿ. 8: ಬಳ್ಳಾರಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಿಂದ ಮರುಆಯ್ಕೆಯಾಗಿ ಬುಧವಾರ ವಿಧಾನ ಸಭೆ ಪ್ರವೇಶಿಸುತ್ತಿದ್ದಂತೆ ಬಿ. ಶ್ರೀರಾಮುಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೇ ಮೊದಲು ಕೈಕುಲುಕಿದ್ದು ಯಾವುದರ ಸಂಕೇತವೋ, ಅಥವಾ ಯಾವುದರ ಮುನ್ಸೂಚನೆಯೋ!?

ಏಕೆಂದರೆ ವಿಧಾನಸಭೆ ಪ್ರವೇಶ ಶಾಸ್ತ್ರ ಮುಗಿಸುತ್ತಿದ್ದಂತೆ ಸನ್ಮಾನ್ಯ ಹೊಸ ಶಾಸಕರು ಯಡಿಯೂರಪ್ಪ ಅರ್ತಾಥ್ ಬಿಜೆಪಿಗೆ ಸರಿಯಾಗಿ ಟಾಂಗ್ ನೀಡುವ ನಿರ್ಧಾರ ಪ್ರಕಟಿಸಿದ್ದಾರೆ. ಏನಪಾ ಅಂದರೆ ಚುನಾವಣೆ ಮುಗಿಯುತ್ತಿದ್ದಂತೆ ಹೊಸ ಪಕ್ಷದ ಅಲೆಯಲ್ಲಿ ಉತ್ತರ ಕರ್ನಾಟಕದ ಪ್ರವಾಸ ಕೈಗೊಂಡು ಹವಾ ಹೇಗಿದೆ ಎಂಬುದನ್ನು ಅಧ್ಯಯನ ಮಾಡುವುದಾಗಿ ಶ್ರೀರಾಮುಲು ಘೋಷಿಸಿದ್ದರು.

ಆದರೆ ಈಗ ಬಿಜೆಪಿಯ ಶಕ್ತಿಕೇಂದ್ರ ಎಂದೇ ಬಿಂಬಿತವಾಗಿರುವ ಶಿವಮೊಗ್ಗದಿಂದಲೇ ಪ್ರವಾಸ ಆರಂಭಿಸುವುದಾಗಿ ಶ್ರೀರಾಮುಲು ಹೇಳಿದ್ದಾರೆ. ಅಲ್ಲಿಗೆ, ವಾಲ್ಮೀಕಿ ಜನಾಂಗದವರು ಹೆಚ್ಚಾಗಿರುವ ಚಿತ್ರದುರ್ಗ, ಬಳ್ಳಾರಿ ಮತ್ತಿತರ ಜಿಲ್ಲೆಗಳಿಂದ ಹೊರಬಂದು ತಮ್ಮ ಶಕ್ತಿಸಾಮರ್ಥ್ಯವನ್ನು ರಾಜ್ಯಾದ್ಯಂತ ಪಸರಿಸಲು ಅವರು ನಿರ್ಧರಿಸಿದ್ದಾರೆ. ಮತ್ತು ಅದಕ್ಕೆ ಶಿವಮೊಗ್ಗವನ್ನೇ ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ.

ಶಿವಮೊಗ್ಗ ಮುಗಿಯುತ್ತಿದ್ದಂತೆ ಹಳೆ ಮೈಸೂರು ಪ್ರಾಂತ್ಯಕ್ಕೆ ಲಗ್ಗೆ ಹಾಕುವ ಯೋಜನೆಯಿದೆ ಎಂದು ರಾಮುಲು ಬಂಟರು ತಿಳಿಸಿದ್ದಾರೆ. ಆನಂತರ ಪಾವಗಡ, ತುಮಕೂರು ಸುತ್ತುವ ಇರಾದೆಯೂ ಇದೆ. ಅಂದಹಾಗೆ, ಅತ್ತ ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲೇ ಪ್ರವಾಸ ಆರಂಭಿಸಲು ಶ್ರೀರಾಮುಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+