ರೇಪ್: ಸಿಖ್ ಯುವಕನ ಗೊಟಕ್ ಅನಿಸಿದ ವೈದ್ಯ ವಿದ್ಯಾರ್ಥಿನಿ

sikh-man-burnt-alive-in-car-by-nri-medico
ಲಂಡನ್, ಡಿ. 8: ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕೋಟ್ಯಾಧೀಶ ಸಿಖ್ ಯುವಕನನ್ನು ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಇಬ್ಬರು ಗ್ಯಾಂಗಸ್ಟರುಗಳಿಗೆ ಸುಪಾರಿ ನೀಡಿ ಸಾಯಿಸಿದ್ದಾಳೆ. ಈ ಕೊಲೆ ಕಳೆದ ಫೆಬ್ರವರಿಯಲ್ಲಿ ನಡೆದಿದ್ದು, ಲಂಡನ್‌ನ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಈ ಮಾಹಿತಿ ಬಹಿರಂಗವಾಗಿದೆ.

ಏನಪಾ ಕೇಸ್ ಅಂದರೆ ಗಗನ್‌ದೀಪ್ ಸಿಂಗ್‌ ಎಂಬ 21 ವರ್ಷದ ಯುವಕ ಕೆಲವು ತಿಂಗಳುಗಳ ಹಿಂದೆ 20 ವರ್ಷದ ಮುಂಡಿಲ್ ಮಾಹಿಲ್ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ್ದ. ಇದರಿಂದ ಸಿಟ್ಟಿಗೆದ್ದ ವೈದ್ಯಕೀಯ ವಿದ್ಯಾರ್ಥಿನಿ ಮಾಹಿಲ್ ಇಬ್ಬರನ್ನು ಬಾಡಿಗೆ ಹಂತಕರನ್ನು ನೇಮಿಸಿ, ಗಗನ್‌ದೀಪನನ್ನು ಮುಗಿಸಲು ಸೂಚನೆ ನೀಡಿದ್ದಾಳೆ. ಕುತೂಹಲದ ಸಂಗತಿಯೆಂದರೆ ಹಂತಕರಲ್ಲೊಬ್ಬ ಮಾಹಿಲ್ ಳ ಪ್ರೇಮಿಯೂ ಹೌದು.

ಕೊಲೆ ಹೇಗಾಯಿತು?: ತನ್ನ ಮನೆಗೆ ಬರುವಂತೆ ಗಗನ್‌ದೀಪ್ ಸಿಂಗ್‌ಗೆ ಮೊಬೈಲ್ ಮೂಲಕ ಮಾಹಿಲ್ ಸಂದೇಶ ಕಳುಹಿಸಿದ್ದಳು. ಅದರಂತೆ ರಾತ್ರಿ 11 ಗಂಟೆಯ ವೇಳೆಗೆ ಗಗನ್‌ದೀಪ್ ಬಂದಾಗ ಮಾಹಿಲ್ ಮನೆಯಲ್ಲಿದ್ದ ಇಬ್ಬರು ಅವನ ಮೇಲೆ ಆಕ್ರಮಣ ನಡೆಸಿದ್ದರು. ಬಳಿಕ ಗಗನ್‌ದೀಪನನ್ನು ಆತನದೇ ಕಾರಿಗೆ ತುರುಕಿ, ಬೆಂಕಿ ಹಚ್ಚಿದ್ದರು ಎಂದು ಆರೋಪಿಸಲಾಗಿದೆ.

Sikh TV ಮಾಲೀಕ ಗಗನ್‌ದೀಪ್ ಟೆಡ್ಡಿ ಬೇರ್ ಮತ್ತು ಹೂವುಗಳನ್ನು ಹಿಡಿದುಕೊಂಡು ಮಾಹಿಲ್‌ಳ ಬೆಡ್‌ರೂಂಗೆ ಬಂದಾಗ ಅಲ್ಲಿ ಆತ ಕಂಡದ್ದು ಹರ್ವಿಂದರ್ ಶೋಕರ್ ಮತ್ತು ಬಾಡಿಗೆ ಹಂತಕ ಡ್ಯಾರನ್ ಪೀಟರ್ಸ್‌. ಇವರಿಬ್ಬರೂ ಗಗನ್‌ದೀಪನನ್ನು ಮನಸೋ ಇಚ್ಛೆ ಥಳಿಸಿದಾಗ ಅವ ಪ್ರಜ್ಞೆ ತಪ್ಪಿಬಿದ್ದ.

ಬಳಿಕ, ಗಗನ್‌ದೀಪನನ್ನು ಕಾರಿಗೆ ಎತ್ತಿಹಾಕಿಕೊಂಡು ಹೊರಟ ಪಾತಕಿಗಳು ಕಾರಿಗೆ ಬೆಂಕಿ ಹಚ್ಚಿ ಅವನನ್ನು ಸಜೀವ ದಹನ ಮಾಡಿದರು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+