ಕಳ್ಳ ಲೆಕ್ಕ ಕೊಟ್ಟ ಗೂಗಲ್ ಗೆ ತೆರಿಗೆ ಇಲಾಖೆ ನೋಟಿಸ್

ಗೂಗಲ್ ಸಂಸ್ಥೆಯ ಭಾರತದ ವಿಭಾಗದ ಆದಾಯ, ಲಾಭ ನಷ್ಟದ ಸರಿ ಲೆಕ್ಕಾಚಾರ ನೀಡದ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.
ಇತ್ತೀಚೆಗೆ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರು ಗೂಗಲ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲು ಯತ್ನಿಸಿದ್ದರು. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಗೂಗಲ್ ಹೇಳಿಕೆ ನೀಡಿತ್ತು.
ಗೂಗಲ್ ಸಂಸ್ಥೆ ನಿವ್ವಳ ಲಾಭ, ಜಾಹೀರಾತುಗಳಿಂದ ಪಡೆಯುತ್ತಿರುವ ಆದಾಯ ಹಾಗೂ ಗೂಗಲ್ ಐರ್ಲೆಂಡ್ ಗೆ ಅದನ್ನು ವಿಲೇವಾರಿ ಮಾಡುತ್ತಿರುವ ವಿವರಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಪ್ರಶ್ನಿಸಿದೆ.
ಗೂಗಲ್ ಆಡ್ ವರ್ಲ್ಡ್ ಮೂಲಕ ಮೂಲಕ ಭಾರತದಲ್ಲಿ ಅನೇಕ ವೆಬ್ ತಾಣಗಳಲ್ಲಿ ಜಾಹೀರಾತುಗಳನ್ನು ಹಾಕಲಾಗುತ್ತದೆ. ಈ ಗೂಗಲ್ ಜಾಹೀರಾತುಗಳಿಂದ ಕಂಪನಿ ಗಳಿಸುತ್ತಿರುವ ಲಾಭದ ಬಗ್ಗೆ ಕೇಳಲಾಗಿದೆ.
ಎಕಾನಾಮಿಕ್ ಟೈಮ್ಸ್ ವರದಿಯ ಪ್ರಕಾರ 2008-09 ಆರ್ಥಿಕ ವರ್ಷದಲ್ಲಿ ಗೂಗಲ್ ಇಂಡಿಯಾ 7.49 ಆದಾಯ ಗಳಿಕೆಯಾಗಿದೆ ಎಂದು ಪ್ರಕಟಿಸಿದೆ. ಆದರೆ ಸರಿಯಾದ ಲೆಕ್ಕಾಚಾರದಂತೆ 167.32 ಕೋಟಿ ಆದಾಯ ಗಳಿಕೆಯಾಗಿದೆ. ಕಂಪನಿ ಟಿಡಿಎಸ್, ನಿವ್ವಳ ಆದಾಯ ಲೆಕ್ಕಾಚಾರ ಹಾಕಿರುವ ತೆರಿಗೆ ಇಲಾಖೆ 2011ರಲ್ಲಿ 74 ಕೋಟಿ ರೂ. ತೆರಿಗೆ ಪಾವತಿ ಮಾಡುವಂತೆ ಗೂಗಲ್ ಕಂಪನಿಗೆ ಸೂಚಿಸಿದೆ.












Click it and Unblock the Notifications