ಶ್ರೀರಾಮುಲು ಪಟ್ಟಾಭಿಷೇಕಕ್ಕೆ 'ಅಹಿಂದ'ವೇ ಕಾರಣ

ದಾಖಲೆಯ ಹೆಚ್ಚುವರಿ ಮತದಾನದ ಮೂಲಕ ಶ್ರೀರಾಮ ಪಟ್ಟಾಭಿಷೇಕವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಮುಸ್ಲಿಮರು, ಹಿಂದುಳಿದವರು ಮತ್ತು ದಲಿತ ಮತಗಳು ರಾಮುಲುರನ್ನು ಈ ಸ್ಥಾನಕ್ಕೆ ನಿರ್ಣಾಯಕವಾಗಿ ಆರಿಸಿ ಕಳಿಸಿವೆ. ಚುನಾವಣೆಯಲ್ಲಿ ಶ್ರೀರಾಮುಲುಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ. ಎಸ್. ದ್ವಾರಕನಾಥ್ ಸಾಥ್ ನೀಡಿರುವುದು ಗಮನಾರ್ಹ.
ಇದರೊಂದಿಗೆ ಬಳ್ಳಾರಿ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯವನ್ನು ಪ್ರತಿನಿಧಿಸಿ, ಗೆದ್ದುಕೊಂಡ ಪಕ್ಷೇತರ ಅಭ್ಯರ್ಥಿ ಬಿ. ಶ್ರೀರಾಮುಲು 'ಅಹಿಂದ'ದ ನೂತನ ನಾಯಕನಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿವೆ. ಹಯೊಸ ಪಕ್ಷದ ಹೊಸ್ತಿಲಲ್ಲಿ ರಾಮುಲುಗೆ ಅಹಿಂದ ನಾಯಕರು ಈಗಾಗಲೇ ಅಖಂಡ ಬೆಂಬಲ ಘೋಷಿಸಿದ್ದಾರೆ.
ಕಳೆದೈದು ವರ್ಷಗಳಿಂದ ಸುಪ್ತವಾಗಿದ್ದ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಸಂಘಟನೆಗೆ ರಾಮುಲು ಹೊಸ ಸಾರಥಿಯಾಗಲಿದ್ದಾರೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದಲ್ಲಿ ಅಹಿಂದ ಆಂದೋಲನವನ್ನು ಜೀವಂತವಾಗಿಡಲು ವಿಫಲವಾಗಿರುವುದೂ ಇದಕ್ಕೆ ಹೇತುವಾಗಿದೆ.












Click it and Unblock the Notifications