ರೈಲು ನಿಂತಾಗ ಪೊದೆಗೆ ಎಳೆದೊಯ್ದು ಅನುಭವಿಸುತ್ತಿದ್ದ

Minor rape, Mumbai
ಮುಂಬೈ, ಡಿ.5: ಉತ್ತರಪ್ರದೇಶ ಮೂಲದ ಯುವಕನನ್ನು ಮುಂಬೈ ರೈಲ್ವೇ ಪೊಲೀಸರು ಬಲು ಪ್ರಯಾಸದಿಂದ ಸೆರೆ ಹಿಡಿದಿದ್ದಾರೆ. ಸಹ ಪ್ರಯಾಣ ಮಾಡುತ್ತಿದ್ದ ಅಪ್ರಾಪ್ತ ವಯಸ್ಕಳ ಮೇಲೆ ಎರಡು ಬಾರಿ ಅತ್ಯಾಚಾರ ಎಸೆಗಿ, ಲೈಂಗಿಕ ಕಿರುಕುಳ ನೀಡಿದ ಆರೋಪವನ್ನು ಈ ಯುವಕನ ಮೇಲೆ ಹೊರೆಸಲಾಗಿದೆ.

ಪುಣೆ ನಿವಾಸಿಯಾಗಿರುವ ಕಿಶನ್ ಸಹಾನಿ ಎಂಬ 21 ವರ್ಷ ವಯಸ್ಸಿನ ಯುವಕ, 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸೆಗಿದ್ದಾನೆ. ಸೋಲಾಪುರದಿಂದ ಮುಂಬೈಗೆ ಹೊರಟ್ಟಿದ್ದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡ ಕಿಶನ್, ತಪ್ಪಿಸಿಕೊಳ್ಳುವ ಯತ್ನದಲ್ಲಿ ದಾದರ್ ಸ್ಟೇಷನ್ ನಲ್ಲಿ ಸಿಕ್ಕಿಬಿದ್ದಿದ್ದಾನೆ.

ರೈಲ್ವೇ ಪೊಲೀಸರ ಕೈಲಿರುವ ದೂರಿನ ಪ್ರತಿ ಪ್ರಕಾರ, ಸಹಾನಿ ಕೂಡಾ ಯುವತಿ ಜೊತೆ ಸೋಲಾಪುರದಲ್ಲಿ ರೈಲು ಹತ್ತಿದ್ದಾನೆ. ಪುಣೆ ನಿಲ್ದಾಣದಲ್ಲಿ ಮುಂಜಾನೆ ವೇಳೆ ರೈಲು ನಿಲುಗಡೆ ಸಮಯವನ್ನು ಬಳಸಿಕೊಂಡು ಆಕೆಯನ್ನು ಹತ್ತಿರದ ಪೊದೆಗೆ ಕರೆದುಕೊಂಡು ಹೋಗಿ ಅನುಭವಿಸಿದ್ದಾನೆ.

ನಂತರ ಆಕೆಯನ್ನು ಬೆದರಿಸಿ ಮತ್ತೆ ರೈಲು ಹತ್ತಿಸಿದ್ದಾನೆ. ದಾದರ್ ಸ್ಟೇಷನ್ ನಲ್ಲೂ ತನ್ನ ನೀಚ ಕೃತ್ಯ ಮುಂದುವರೆಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ.

ದಾದರ್ ಸ್ಟೇಷನ್ ನಲ್ಲಿ ಇಳಿದ ಬಾಲಕಿ ತನ್ನ ಸಂಬಂಧಿಕರಿಗೆ ಕರೆ ಮಾಡಿದ್ದಾಳೆ. ಸ್ಟೇಷನ್ ಗೆ ಬಂದ ಸಂಬಂಧಿಕರಿಗೆ ಬಾಲಕಿಯ ಸ್ಥಿತಿ ಕಂಡು ಅನುಮಾನ ಬಂದಿದೆ. ನಂತರ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲಾಗಿದೆ.

ನಂತರ ಪೊಲೀಸರಿಗೆ ತನ್ನ ಕಥೆಯನ್ನು ವಿಸ್ತಾರವಾಗಿ ಹೇಳಿದ್ದಾಳೆ. ವಿವರ ಪಡೆದು ಹುಡುಕಾಟ ಆರಂಭಿಸಿದ ಪೊಲೀಸರಿಗೆ ದಾದರ್ ಸ್ಟೇಷನ್ ನಲ್ಲೇ ಅತ್ಯಾಚಾರಿ ಕಿಶನ್ ಕಾಣಿಸಿಕೊಂಡಿದ್ದಾನೆ. ಒಂದಷ್ಟು ಕಾಲ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿದ್ದ ಕಿಶನ್, ಕೊನೆಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+