ಆಗ ಗಣೇಶ್ ಟಪಾಲಿಗೆ ಕ್ಯಾರೆ ಎನ್ನದ ಶ್ರೀಲಕ್ಷ್ಮಿ ಈಗ ನಗೆಪಾಟಲು

ಜನಾರ್ದನ ರೆಡ್ಡಿಯ ಓಬಳಾಪುರಂ ಮೈನಿಂಗ್ ಕಂಪನಿಗೆ ಗುತ್ತಿಗೆ ನೀಡುವ ಕಡತದಲ್ಲಿ ಶ್ರೀಲಕ್ಷ್ಮಿ ರೆಡ್ಡಿಗೆ ಅನುಕೂಲವಾಗುವಂತೆ ತಾಂತ್ರಿಕವಾಗಿ ಕೆಲವು ಪದಗಳನ್ನು ಕೈಬಿಟ್ಟಿದ್ದಾರೆ. ರೆಡ್ಡಿಗೆ ನೆರವಾಗುವುದು ಇದರ ಉದ್ದೇಶವಾಗಿತ್ತು ಎಂಬುದು ಸಿಬಿಐ ಪ್ರತಿವಾದವಾಗಿದೆ.
ಆದರೆ ಸಿಬಿಐ ಈಗ ತಮ್ಮ ಕಕ್ಷಿದಾರರ (ಶ್ರೀಲಕ್ಷ್ಮಿ) ಕಸ್ಟಡಿ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ಹೇಗೆ ಕೆಲವು ಪದಗಳನ್ನು ಏರಪೇರು ಮಾಡಿದ್ದಾರೋ ಅದೇ ರೀತಿ ನಮ್ಮ ಕಕ್ಷಿದಾರರೂ ಏಕೆ ಕಣ್ತಪ್ಪಿ ಪ್ರಮಾಸ ಎಸಗಿರಬಾರದು ಎಂದು ಕೋರ್ಟಿನ ಗಮನ ಸೆಳೆಯಲು ಹೋಗಿ ಸರಿಯಾಗಿ ಇಕ್ಕಿಸಿಕೊಂಡಿದ್ದಾರೆ. ಏನಾಯಿತೆಂದರೆ...
ಸಿಬಿಐಗೆ ತನ್ನ ತಪ್ಪಿನ ಅರಿವಾದ ತಕ್ಷಣವೇ ನ್ಯಾಯಾಲಯದಲ್ಲೆ ತಿದ್ದುಪಡಿಗೆ ಅವಕಾಶ ಕೋರುವ ಮೂಲಕ ಬಚಾವಾಯಿತು. ಆದರೆ ಈ ಮಹಾತಾಯಿ ಶ್ರೀಲಕ್ಷ್ಮಿ ಓಬಳಾಪುರಂ ಮೈನಿಂಗ್ ಕಂಪನಿಗೆ ಗುತ್ತಿಗೆ ನೀಡುವ ಸರಕಾರಿ ಆದೇಶದಲ್ಲಿ (GO) ಬೇಕಂಕಲೇ ಮಾಡಿರುವ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವಿತ್ತು.
ಬಳ್ಳಾರಿಯ ಮತ್ತೊಬ್ಬ ಮೈನಿಂಗ್ ದೊರೆ ಟಪಾಲ್ ಗಣೇಶ್ ಅವರು ಈ ತಪ್ಪುಗಳನ್ನು ಮೇಡಂ ಗಮನಕ್ಕೆ ತಂದಿದ್ದರು. (ಸ್ವತಃ ಟಪಾಲ್ ಗಣೇಶ್ ಅವರೂ ಮೈನಿಂಗ್ ಗುತ್ತಿಗೆ ಕೋರಿ ಆಗ ಅರ್ಜಿಯನ್ನೂ ಸಲ್ಲಿಸಿದ್ದರು)
ಆದರೆ ರೆಡ್ಡಿ- ವೈಎಸ್ಆರ್ ಕೃಪಾಪೋಷಿತ ಮೇಡಂ ಅದೆಲ್ಲ ಆಗೋಕಿಲ್ಲ ಎಂದಿದ್ದರು. ಸೋ, ತಮ್ಮ ಗಮನಕ್ಕೆ ಬಂದಿದ್ದರೂ ಮೇಡಂ ತಪ್ಪು ತಿದ್ದಿಕೊಳ್ಳಲಿಲ್ಲ. ಉದ್ದೇಶಪೂರ್ವಕವಾಗಿ ಕೆಲವು ಪದಗಳನ್ನು ಕೈಬಿಟ್ಟಿದ್ದಾರೆ ಎಂಬುದನ್ನು ಸಿಬಿಐ ಕೋರ್ಟಿನ ಗಮನಕ್ಕೆ ತರುತ್ತಿದ್ದಂತೆ ಮೇಡಂ ಶ್ರೀಲಕ್ಷ್ಮಿ ಪರ ವಕೀಲರು ಗಪ್ ಚುಪ್ ಆಗಿದ್ದಾರೆ. ಅಲ್ಲಿಗೆ ಮೇಡಂ ವಿರುದ್ಧ ಕೇಸ್ ಮತ್ತಷ್ಟು ಬಿಗಿಯಾಗಿದೆ.












Click it and Unblock the Notifications