ರೆಡ್ಡಿ ಪ್ರಕರಣ: ಐಎಎಸ್ ಶ್ರೀಲಕ್ಷ್ಮಿ ಈಗ್ಲೋ ಆಗ್ಲೊ ಅಮಾನತು
ಹೈದರಾಬಾದ್,
ನ. 30: ಓಬಳಾಪುರಂ ಅಕ್ರಮ ಗಣಿಗಾರಿಕೆ ಸಂಬಂಧ ಸೋಮವಾರ ಸಂಜೆ ಸಿಬಿಐ ಬಂಧನಕ್ಕೊಳಗಾದ ಹಿರಿಯ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ ಅವರನ್ನು ವಿಚಾರಣೆ ಕಾಯ್ದಿರಿಸಿ, ಐಎಎಸ್ ಪಟ್ಟದಿಂದ ಅಮಾನತು ಮಾಡುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳಂಕಿತ ಅಧಿಕಾರಿಗಳ ಬಗ್ಗೆ ಗರಂ ಆಗಿರುವ ಆಂಧ್ರ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅಂತಹವರನ್ನು ಕಡ್ಡಾಯ ನಿವೃತ್ತಿ ಮೇಲೆ ಮನೆಗೆ ಕಳಿಸಲು ಆಲೋಚಿಸುತ್ತಿದ್ದಾರೆ. id="toptextpromo">ಈ
ಹಿನ್ನೆಲೆಯಲ್ಲಿ, 1988ರಲ್ಲಿ ಐಎಎಸ್ ಟಾಪರ್ ಎಂಬ ಹೆಮ್ಮೆಗೆ ಪಾತ್ರರಾಗಿದ್ದ ಯರ‌್ರಂ ಶ್ರೀಲಕ್ಷ್ಮಿ ಅವರ 22 ವರ್ಷಗಳ ಸೇವೆ ಅಂಧಪತನ ಕಾಣಲಿದೆ. ಈ ಮಧ್ಯೆ, ಸಿಬಿಐ ಕಸ್ಟಡಿ ತಪ್ಪಿಸಿಕೊಳ್ಳಲು ಶ್ರೀಲಕ್ಷ್ಮಿ ಪರ ವಕೀಲರು ಭೂತಗನ್ನಡಿ ಹಾಕಿಕೊಂಡು ಸಿಬಿಐ ಅರ್ಜಿಯಲ್ಲಿ ತಪ್ಪುಹುಡುಕುತ್ತಿದ್ದಾರೆ. ಸಿಬಿಐ ಅರ್ಜಿಯಲ್ಲಿ ಕೆಲವು ಕಡೆ 8 ದಿನಗಳ ಕಸ್ಟಡಿ ಬೇಕು ಎಂದು ಕೇಳಿದ್ದರೆ ಇನ್ನು ಕೆವು ಕಡೆ 15 ದಿನಗಳ ಕಸ್ಟಡಿ ಬೇಕು ಎಂದಿದೆ. id='are-slot-1' class='oiad oi-axt oiadv'> id='top-searched-articles'>ಜತೆಗೆ
ಈಗಾಗಲೇ ಬಂಧನದಲ್ಲಿರುವ ಮತ್ತೊಬ್ಬ ಹಿರಿಯ ಅಧಿಕಾರಿ ರಾಜಗೋಪಾಲ್ ಅವರ ಹೆಸರು ಮತ್ತು ಶ್ರೀಲಕ್ಷ್ಮಿ ಹೆಸರನ್ನು ಅದಲುಬದಲು ಮಾಡಿಕೊಂಡಿದೆ. ಆದರೆ ಕೋರ್ಟ್ ಸಿಬಿಐ ನೆರವಿಗೆ ನಿಂತಿದೆ. ಇವೆಲ್ಲ ಮೈನರ್ ಮಿಸ್ಟೇಕ್. ಡೋಂಟ್ ಮಿಸ್ಟೇಕ್ ಎಂದು ಶ್ರೀಲಕ್ಷ್ಮಿ ವಕೀಲರನ್ನು ಗದರಿ ಕೊಂಡಿದೆ.











Click it and Unblock the Notifications