ಡಿಕೆಶಿ ಭೂಮಿ ಎಲ್ಲಿದೆ ಅಂತಾ ನನಗೇ ಗೊತ್ತೇ ಇಲ್ಲ!

ಇದಕ್ಕೆ ಡಿಕೆ ಶಿವಕುಮಾರ್ ಅವರ ಹಸಿಸುಳ್ಳಿಗೆ ಪ್ರತಿಕ್ರಿಯಿಸಿರುವ ಅಂದಿನ ರಾಜ್ಯ ಮುಖ್ಯ ಕಾರ್ಯದರ್ಶಿ ಬಿಕೆ ದಾಸ್ ಅವರು, ನನಗೆ ಡಿಕೆ ಶಿವಕುಮಾರ್ ಅವರ ಭೂಮಿ ಎಲ್ಲಿದೆ ಎಂಬುದು ಗೊತ್ತಿಲ್ಲ. ನನ್ನ ಅವಧಿಯಲ್ಲಿ ಯಾವುದೇ ಡಿನೋಟಿಫಿಕೇಷನ್ ಸಂಬಂಧ ಜಮೀನು ಪರೀಕ್ಷೆ ನಡೆದಿಲ್ಲ ಎಂದಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ ಡಿಕೆ ಶಿವಕುಮಾರ್ ಅವರು ಡಿನೋಟಿಫಿಕೇಷನ್ ಲಾಭ ಪಡೆದು ಬೆನ್ನಿಗಾನಹಳ್ಳಿಯಲ್ಲಿ ಜಮೀನು ಪಡೆದಿರುವ ಬಗ್ಗೆ ಬೆಂಗಳೂರು ಮಿರರ್ ನಲ್ಲಿ ವರದಿ ಪ್ರಕಟವಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆ ಶಿವಕುಮಾರ್ ಅವರು ಬಿಕೆ ದಾಸ್ ಅವರು ಪರಿಶೀಲನೆ ನಡೆಸಿ, ಸರ್ಕಾರದ ಆದೇಶದಂತೆ ಜಮೀನು ಮಂಜೂರು ಮಾಡಿದ್ದರು ಎಂದು ಬೊಗಳೆ ಬಿಟ್ಟಿದ್ದರು.
ಡಿನೋಟಿಫಿಕೇಷನ್ ಹೇಗೆ : ಜೆಡಿಎಸ್ ಸರ್ಕಾರ ಇದ್ದ ಕಾಲದಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ದಾಸ್ ಅವರು 2006 ರಲ್ಲಿ ನಿವೃತ್ತಿ ಹೊಂದಿದ್ದಾರೆ. ಡಿನೋಟೀಫಿಕೇಷನ್ ಪ್ರಕ್ರಿಯೆ ಆರಂಭವಾದರೆ ಜಮೀನು ಸ್ವಾದೀನಕ್ಕೆ ಬಿಡಿಎ ಮುಂದಾಗುತ್ತದೆ.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ, ಮುಖ್ಯಮಂತ್ರಿಗಳ ಕಚೇರಿಗಳ ಸಹಯೋಗದೊಂದಿಗೆ ಈ ಕಾರ್ಯ ನಡೆಯುತ್ತದೆ.
ಆದರೆ, ಜಮೀನು ಪರಿಶೀಲನೆ ಮಾಡುವುದು ಮುಖ್ಯ ಕಾರ್ಯದರ್ಶಿ ಕೆಲಸ ಅಲ್ಲ ಎಂಬ ಸಣ್ಣ ಅರಿವು ಕೂಡಾ ಇಲ್ಲದಂತೆ ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ದಾಸ್ ಪ್ರತಿಕ್ರಿಯಿಸಿದ್ದಾರೆ.
ಡಿಕೆ ಶಿವಕುಮಾರ್ ಲಾಭ ಪಡೆದಿದ್ದಾರೂ ಹೇಗೆ? ಏಕೆ?











Click it and Unblock the Notifications