ರೆಡ್ಡಿ- ವೈಎಸ್ಆರ್ ಜೋಡಿಯಿಂದ ಶ್ರೀಲಕ್ಷ್ಮಿಗೆ ಕಣ್ಣೀರೇ ಗತಿ
ಹೈದರಾಬಾದ್,
ನ. 25: ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿ (ಅಕ್ರಮ) ಗಣಿವೀರ ಜನಾರ್ದನ ರೆಡ್ಡಿ ಅವರೇನೋ ಬೆಚ್ಚಗಿದ್ದಾರೆ. ಇನ್ನು ಅವರ ಅಕ್ರಮಗಳನ್ನು ಪೋಷಿಸುತ್ತಿದ್ದ ಆಂಧ್ರದ ಮಾಜಿ ಮುಖ್ಯಮಂತ್ರಿ ವೈಎಸ್ ರಾಜಶೇಖರ ರೆಡ್ಡಿ ಅವರು ಈ ಲೋಕದಿಂದಲೇ ದೂರವಾಗಿದ್ದಾರೆ. ಆದರೆ ಈ ಜೋಡಿಯ ಅಕ್ರಮಗಳ ಫಲವಾಗಿ ತ್ರಿಶಂಕು ಸ್ಥಿತಿಗೆ ತಲುಪಿ, ಕಣ್ಣೀರು ಹಾಕುತ್ತಿರುವವರು ಹಿರಿಯ ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ. id="toptextpromo">ಹಾಗೆಂದ
ಮಾತ್ರಕ್ಕೆ ವೈ. ಶ್ರೀಲಕ್ಷ್ಮಿ ಅಮಾಯಕರು, ಅಕ್ರಮ ಗಣಿಗೆ ನೀರೆರೆದಿಲ್ಲ ಅಂತೇನೂ ಅಲ್ಲ. ರೆಡ್ಡಿ-ವೈಎಸ್ಆರ್ ಜೋಡಿ ಆಶೀರ್ವಾದ ಈಕೆಯ ಮೇಲೆ ಸದಾ ಇತ್ತು. ಈಗ ಅದನ್ನೇ ಸಾಬೀತು ಪಡಿಸಲು ಸಿಬಿಐ ಶ್ರಮಿಸುತ್ತಿರುವುದು. ಮತ್ತು ಅದರಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹಾಗೆ
ನೋಡಿದರೆ, 22ನೇ ವಯಸ್ಸಿಗೇ ಐಎಎಸ್ ಸೇರಿದ ವೈ. ಶ್ರೀಲಕ್ಷ್ಮಿಗೆ ಅತ್ಯುತ್ತಮ ಭವಿಷ್ಯವಿತ್ತು. ಆದರೆ ಅವರ ಭವಿಷ್ಯವೇ ಈಗ ಮುಸುಕಾಗಿದೆ. ಐಎಎಸ್ ಸೇವಾವಧಿಯ ಕೊನೆ ಕೊನೆಗೆ ಆಯಕಟ್ಟಿನ ಸ್ಥಾನ ಅಲಂಕರಿಸಬಹುದಾಗಿದ್ದ ಈಕೆ ಈಗ ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ. ಆದರೆ ಮಹತ್ವಾಕಾಂಕ್ಷಿ ವೈ. ಶ್ರೀಲಕ್ಷ್ಮಿ ಹಣದ ಹಿಂದೆ ಬಿದ್ದರು. ಬಂಗಲೆಗಳ ಮೇಲೆ ಬಂಗಲೆಗಳನ್ನು ಎಬ್ಬಿಸಿದರು. ಬ್ಯಾಂಕ್ ಲಾಕರುಗಳಲ್ಲಿ ಇವರ ಹೆಸರಲ್ಲಿ ಚಿನ್ನ ಕೊಳೆಯುತ್ತಾ ಬಿದ್ದಿದೆ.











Click it and Unblock the Notifications