ಐಎಎಸ್ ಶ್ರೀಲಕ್ಷ್ಮಿ ಕಣ್ಣೀರಿಗೆ ಕ್ಯಾರೆ ಎನ್ನದ ಸಿಬಿಐ ಲಕ್ಷ್ಮಿನಾರಾಯಣ

cbi-makes-reddy-ysr-srilakshmi-case-strong
ಹೈದರಾಬಾದ್, ನ. 25: ಗಣಿಗಾರಿಕೆಯಲ್ಲಿ ರೆಡ್ಡಿ-ವೈಎಸ್ಆರ್ ಅಕ್ರಮಗಳ ಫಲಾನುಭವಿ ಐಎಎಸ್ ವೈ. ಶ್ರೀಲಕ್ಷ್ಮಿಗೆ ಸಿಬಿಐ ಜಂಟಿ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಿದ್ದರೆ ಈಕೆ ತತ್ತರಿಸುತ್ತಿದ್ದಾರೆ. ಆಗಾಗ ಕಣ್ಣಿರುಹಾಕುವ ಜಗನ್ನಾಟಕವಾಡುತ್ತಿದ್ದಾರೆ.

ಆದರೆ ಲಕ್ಷ್ಮಿನಾರಾಯಣ ಮಾತ್ರ ಕರಗುತ್ತಿಲ್ಲ. ಇಂತಹವರನ್ನು ಹೇಗೆ ಬಾಯಿಬಿಡಿಸುವುದು ಎಂಬುದು ಲಕ್ಷ್ಮಿನಾರಾಯಣ ಅವರಂತಹ ಅನುಭವೀ ಸಿಬಿಐ ಅಧಿಕಾರಿಗಳಿಗೆ ಹೇಳಿಕೊಡಬೇಕಾ?

ಅತ್ತ, ಈ ಹಿಂದೆ ಬ್ಯೂರೊಕ್ರಸಿ ವಲಯದಲ್ಲಿ ಶಕ್ತಿಶಾಲಿ ಮಹಿಳೆ ಎನಿಸಿದ್ದ ಐಎಎಸ್ ಶ್ರೀಲಕ್ಷ್ಮಿಯನ್ನು ಈಗ ಮುಖ್ಯಮಂತ್ರಿ ಎನ್. ಕಿರಣ್ ಕುಮಾರ್ ರೆಡ್ಡಿ ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ. ವೈ. ಶ್ರೀಲಕ್ಷ್ಮಿ ಮಾತ್ರ ತಮ್ಮ ದುಃಸ್ಥಿತಿಗೆ ತಾವೇ ಪಶ್ಚಾತಾಪ ಪಡುತ್ತಿದ್ದಾರೆ. ನನ್ನ ಮಾನ ಮರ್ಯಾದೆಯೆಲ್ಲ ಹೋಯಿತು ಎನ್ನುತ್ತಿದ್ದಾರೆ.

ಕರ್ನಾಟಕದ ಮಾಜಿ ಮಂತ್ರಿ ಜನಾರ್ದನ ರೆಡ್ಡಿಗೆ ಓಬಳಾಪುರಂ ಗಣಿ ಪರವಾನಗಿ ದಯಪಾಲಿಸಲು ಲಂಚರುಷುವತ್ತು ಅಂತೆಲ್ಲ ಏನೆಲ್ಲ ಸ್ವೀಕರಿಸಿದ್ದೀಯಾ ಲೆಕ್ಕ ಹೇಳು ಎನ್ನುತ್ತಿದ್ದಾರೆ ಖಡಕ್ ಅಧಿಕಾರಿ ಲಕ್ಷ್ಮಿನಾರಾಯಣ. ವಿಚಾರಣೆಯ ವೇಳೆ ಒಮ್ಮೊಮ್ಮೆ ಭಾವೋದ್ವೇಗಕ್ಕೆ ಒಳಗಾಗುವ ಶ್ರೀಲಕ್ಷ್ಮಿ, ಕಣ್ತುಂಬಿಕೊಂಡು ಈಗ ನನ್ನ ಮಕ್ಕಳಿಗೋಸ್ಕರ ಬದುಕಬೇಕಾಗಿದೆ. ನನ್ನ ಜೀವನ ಎಂಬುದು ಮುಗಿದ ಕಥಾಯಾಗಿದೆ ಎಂದು ಹಲುಬುತ್ತಿದ್ದಾರೆ.

ಅಂದಹಾಗೆ, ವೈ. ಶ್ರೀಲಕ್ಷ್ಮಿ ಅವರು 2007 ರಿಂದ 2009ರವರೆಗೆ ಕೈಗಾರಿಕೆ ಮತ್ತು ಗಣಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಈ ಸಂದರ್ಭದಲ್ಲೇ ಓಬಳಾಪುರಂ ಗಣಿಗಾರಿಕೆ ಗೋಲ್ ಮಾಲ್ ನಡೆದಿರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+