ರೆಡ್ಡಿ ಮಾತು ಕೇಳಿದ್ದೇ ಗ್ರಹಚಾರ ಕೆಟ್ಟಿತು: ಶ್ರೀಲಕ್ಷ್ಮಿ

ಪದೇ ಪದೆ ರಾಜಶೇಖರ ರೆಡ್ಡಿಯತ್ತಲೇ ಬೊಟ್ಟು ಮಾಡಿ ತೋರಿಸುವ ಶ್ರೀಲಕ್ಷ್ಮಿ, ಕಣ್ಮುಚ್ಚಿಕೊಂಡು ಅವರು ತೋರಿಸಿದ ಕಡತಗಳಿಗೆ ಸಹಿ ಹಾಕುತ್ತಾ ಹೋದೆ. ಅದೇ ನನಗೆ ಈಗ ಮುಳುವಾಗಿದೆ ಎನ್ನುತ್ತಾರೆ ವೈ. ಶ್ರೀಲಕ್ಷ್ಮಿ.
ವೈ. ಶ್ರೀಲಕ್ಷ್ಮಿ ಬಗ್ಗೆ ನಾವೀಗ ಸಹಾನುಭೂತಿ ತೋರುತ್ತಾ ಕುಳಿತುಕೊಳ್ಳುವ ಹಾಗಿಲ್ಲ. ಅದು ನಮ್ಮ ಕೆಲಸವೂ ಅಲ್ಲ. ಆದರೂ ಶ್ರೀಲಕ್ಷ್ಮಿ ಕಣ್ಣಿರು ಹಾಕುವುದನ್ನು ಸಹಿಸಿಕೊಳ್ಳಬೇಕು. ಏಕೆಂದರೆ ಡಿಸೆಂಬರ್ 4 ರಷ್ಟೊತ್ತಿಗೆ ನ್ಯಾಯಾಲಯದಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣದ ಸಂಬಂಧ ನಾವು ದೋಷಾರೋಪಪಟ್ಟಿ ದಾಖಲಿಸಲೇಬೇಕು ಎನ್ನುತ್ತಾರೆ ಸಿಬಿಐ ಲಕ್ಷ್ಮಿನಾರಾಯಣ.
ಅದಕ್ಕೂ ಮುನ್ನ, ಐಎಎಸ್ ಅಧಿಕಾರಿಗಳ ಪೈಕಿ ದಿಢೀರನೆ ಶ್ರೀಮಂತಿಕೆ ಸಂಪಾದಿಸಿರುವ ಐಎಎಸ್ ಶ್ರೀಲಕ್ಷ್ಮಿ ಅವರನ್ನು ಸಿಬಿಐ ತಂಡ ಮತ್ತಷ್ಟು ವಿಚಾರಣೆಗೊಳಪಡಿಸುವುದು ಅನಿವಾರ್ಯವಾಗಿದೆ.












Click it and Unblock the Notifications