ಬಿಎಂಟಿಸಿಗೆ 40 ಎಸಿ ಸ್ಲೀಪರ್ ಕೋಚ್ ಬಸ್ ಗಳು

Minister R Ashok
ಬೆಂಗಳೂರು, ನ.24: ನಗರ ಸಾರಿಗೆ ಮತ್ತೆ ಡಬ್ಬಲ್ ಡೆಕ್ಕರ್ ವಾಹನಗಳು ಸೇರ್ಪಡೆಯಾಗುವ ಸುದ್ದಿ ಹಬ್ಬಿರುವ ಬೆನ್ನಲ್ಲೇ ಬಿಎಂಟಿಸಿಗೆ ಎಸಿ ಸ್ಲೀಪರ್ ಕೋಚ್ ಬಸ್ ಗಳನ್ನು ಸೇರಿಸಲು ಸಾರಿಗೆ ಸಚಿವ ಆರ್ ಅಶೋಕ್ ಮುಂದಾಗಿದ್ದಾರೆ.

ಪತ್ರಕರ್ತರಿಗೆ ರಿಯಾಯಿತಿ ದರದ ಪಾಸ್ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶೋಕ್, ಎಸಿ ಸ್ಲೀಪರ್ ಕೋಚ್ ಬಸ್ ಗಳನ್ನು ಪ್ರವಾಸಿಗರನ್ನು ಆಕರ್ಷಿಸಲು ಬಳಸಲಾಗುವುದು. ದೂರ ಪ್ರಯಾಣದ ಮಾರ್ಗ, ಪ್ರವಾಸಿ ತಾಣ, ದೇಗುಲ ದರ್ಶನಕ್ಕೆ ಈ ಸೇವೆ ಲಭ್ಯವಾಗಲಿದೆ ಎಂದರು.

ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ಕಾಯಕಲ್ಪ ನೀಡಲು ಬಯಸಿರುವ ಅಶೋಕ್ ಅವರು ಇಲಾಖೆ ಕೈಗೊಂಡಿರುವ ಯೋಜನೆಗಳ ವಿವರ ನೀಡಿದರು.

* ಬಿಎಂಟಿಸಿಯ 6,500 ಬಸ್ ಗಳಿಗೆ ಜಿಪಿಎಸ್ ಅಳವಡಿಸಲಾಗುವುದು.
* ಈ ಟಿಕೆಟಿಂಗ್ ವ್ಯವಸ್ಥೆ ಜಾರಿಗೆ ತಂದು, ಸಂಸ್ಥೆಯ ದೈನಂದಿನ ಆದಾಯವನ್ನು ನಿಖರವಾಗಿ ತಿಳಿದುಕೊಳ್ಳಲಾಗುವುದು.
* ನಿಮ್ಹಾನ್ಸ್ ರೋಗಿಗಳ ಅನುಕೂಲಕ್ಕಾಗಿ ಉಚಿತ ವೋಲ್ವೋ ಬಸ್ ನೀಡಲಾಗುವುದು.
* 27 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬನಶಂಕರಿ ಬಸ್ ನಿಲ್ದಾಣವನ್ನು ಶೀಘ್ರದಲ್ಲೇ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು.
* ಗುಜರಾತ್ ಮಾದರಿಯಲ್ಲಿ ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ಹೆಬ್ಬಾಳದಲ್ಲಿ 350 ಕೋಟಿ ರು ವೆಚ್ಚದ ಬಸ್ ನಿಲ್ದಾಣ ನಿರ್ಮಾಣ.
* ನರ್ಮ್ ಯೋಜನೆಯಡಿಯಲ್ಲಿ 500 ಬಸ್ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, 300 ಬಸ್ ಒದಗಿಸಲು ಒಪ್ಪಿಗೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+