ಕುಣಿಗಲ್ ಅಬಕಾರಿ, ಪೊಲೀಸ್ ಅಧಿಕಾರಿಗಳಿಗೆ ಮದ್ಯದ ಅಮಲು
ಕುಣಿಗಲ್,
ನ. 23: ಕುಣಿಗಲ್ ತಾಲೂಕಿನಲ್ಲಿ ಮದ್ಯದ ಹಾವಳಿ ಮಿತಿ ಮೀರಿದೆ. ಇಡೀ ತಾಲೂಕಿನ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಆದರೂ ಇಲ್ಲಿನ ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ನಶೆಯೇರಿದವರಂತೆ ಗಡದ್ದಾಗಿ ಮಲಗಿಬಿಟ್ಟಿದ್ದಾರೆ. id="toptextpromo">ಬೇಗೂರು
ಪೋಸ್ಟ್ ಹುಚ್ಚಲಕ್ಕಯ್ಯನ ಪಾಳ್ಯ ಅಂಗಡಿ ಶಿವಣ್ಣ ಎಂಬ ಮಹಾಶಯ ಅಕ್ರಮ ಲೋಕಲ್ ಬಾಟಲುಗಳನ್ನು ಯಾವುದೇ ಎಗ್ಗಿಲ್ಲದೆ ಪಾನಪ್ರಿಯರಿಗೆ ಕುಡಿಸುತ್ತಿದ್ದಾನೆ. ಇದರಿಂದ ಊರ ಜನರ ಸ್ವಾಸ್ಥ್ಯ ಹಾಳಾಗಿದೆ. ಕೂಲಿಕಾರರು, ಕೃಷಿಕರು ಹೆಚ್ಚಾಗಿ ಇದರ ಬಲಿಪಶುಗಳಾಗುತ್ತಿದ್ದಾರೆ. ದನದ ಕೊಟ್ಟಿಗೆ ಅಥವಾ ಹಿತ್ತಲು ಮನೆಗಳಲ್ಲಿ ಇವುಗಳನ್ನು ಬಚ್ಚಿಟ್ಟು, ಮಾರಾಟ ಮಾಡಲಾಗುತ್ತಿದೆ. id='are-slot-1' class='oiad oi-axt oiadv'> id='top-searched-articles'>ಊರಮಂದಿಗೆ
ಬುದ್ಧಿಹೇಳುವ ವ್ಯಕ್ತಿಯೇ ಜನರನ್ನು ಹೀಗೆ ಅಡ್ಡದಾರಿ ಹಿಡಿಸುತ್ತಿದ್ದಾನೆ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇದನ್ನು ನಿಲ್ಲಿಸಲು ದೃಢ ಕ್ರಮ ಕೈಗೊಳ್ಳುತ್ತಾರಾ? ಎಂಬುದು ನೊಂದವರ ಅಳಲು. ಸುಮ್ಮನೆ ಕಾಟಾಚರಕ್ಕೆ ರೇಡ್ ಮಾಡಿ, ಅಕ್ರಮ ಮದ್ಯ ಮಾರಾಟ ನಿಲ್ಲಿಸಿದ್ದೇವೆ ಎಂದು ಹೇಳುವ ಬದಲು ಕಠಿಣ ಕ್ರಮ ಕೈಗೊಂಡು ಊರ ಜನರಿಗೆ ನೆಮ್ಮದಿ ತನ್ನಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಅಬಕಾರಿ ಸಚಿವ ರೇಣುಕಾಚಾರ್ಯ ಸ್ವಲ್ಪ ಇತ್ತ ಗಮನಹರಿಸುವಿರಾ?











Click it and Unblock the Notifications