ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಲೈಂಗಿಕ ತೃಪ್ತಿಗೆ ನಗ್ನ ನರ್ತನ, ಪೋಷಕರ ಗಿಫ್ಟ್

By Mahesh
|
Google Oneindia Kannada News

Parents in Singapore hire strippers to Party
ಸಿಂಗಪುರ, ನ.18: ತನ್ನ ಪತಿ ಪರಸ್ತ್ರೀ ಜೊತೆ ಸಂಭೋಗ ನಡೆಸುವುದನ್ನು ನೋಡಲು ಬಿಡಿ ಎಂದು ಪತ್ನಿಯೊಬ್ಬಳು ಆಗ್ರಹಿಸಿದ ಬೆನ್ನಲ್ಲೇ ಸಿಂಗಪುರದ ಕೆಲ ಪೋಷಕರ ವರ್ತನೆ ಬೆಚ್ಚಿ ಬೀಳಿಸಿದೆ.

ಸಿಂಗಪುರದ ಪೋಷಕರು ತಮ್ಮ ಹದಿಹರೆಯ ಮಕ್ಕಳಿಗೆ ಲೈಂಗಿಕ ಜ್ಞಾನ ಹೇಗೆ ತುಂಬತ್ತಾರೆ ಎಂಬುದನ್ನು ಕಂಡವರು ಬೆಚ್ಚಿದ್ದಾರೆ. ಇಲ್ಲಿನ ಕೆಲ ಪೋಷಕರು ತಮ್ಮ ಮಕ್ಕಳು 20-21 ವರ್ಷ ದಾಟುತ್ತಿದ್ದಂತೆ ಮಕ್ಕಳ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಾರೆ. ಜೊತೆಗೆ ಸ್ಟ್ರಿಪರ್ ಗಳನ್ನು ಅವರ ಮುಂದೆ ನಿಲ್ಲಿಸಿ ಭರ್ಜರಿ ಗಿಫ್ಟ್ ನೀಡುತ್ತಾರೆ.

ಈ ಖಾಸಗಿ ಪಾರ್ಟಿಗಳಿಗೆ ಸ್ಟ್ರಿಪರ್ ಗಳನ್ನು ಗಂಟೆಗಳಿಗೆ ಇಷ್ಟು ಎಂದು ಬಾಡಿಗೆ ಕೊಟ್ಟು ಕರೆಸಿಕೊಳ್ಳಲಾಗುತ್ತದೆ. 21 ವರ್ಷದ ಹುಟ್ಟುಹಬ್ಬದಂದು ಬಂದು ಪೋಲ್ ಡ್ಯಾನ್ಸ್ ಮಾಡುತ್ತಾ ಬಟ್ಟೆ ಕಳಚುವುದಕ್ಕೆ ಆಹ್ವಾನ ಬರುವುದು ಹೆಚ್ಚಾಗಿದೆ ಎಂದು ಯುವರ್ಸ್ ಟ್ರೂಲಿ ಎಸ್ಕಾರ್ಟಿಂಗ್ ಏಜೆನ್ಸಿ ಮಾರುಕಟ್ಟೆ ನಿರ್ವಾಹಕ ಕ್ರಿಸ್ಟಲ್ ಹೇಳುತ್ತಾರೆ.

ಒಂದು ಸೆಷನ್ ಗೆ 1,000 ದಿಂದ 1,500 ಸಿಂಗಪುರ ಡಾಲರ್ ಛಾರ್ಜ್ ಮಾಡಲಾಗುತ್ತದೆ.

ಕೆಲ ಖಾಸಗಿ ಪಾರ್ಟಿಗಳಿಗೆ 400 ಸಿಂಗಪುರ ಡಾಲರ್ ಗಳಿಗೂ ಸ್ಟ್ರಿಪ್ ಶೋ ನಡೆಸಿಕೊಡಲಾಗುತ್ತದೆ ಎಂದು ಕ್ರಿಸ್ಟಲ್ ಹೇಳಿದ್ದಾರೆ.

ಮೇಲ್ಮಧ್ಯಮ ವರ್ಗದ ಉನ್ನತ ಹುದ್ದೆಯಲ್ಲಿರುವ ಉದ್ಯೋಗಿಗಳಿಂದ ಬೇಡಿಕೆ ಹೆಚ್ಚಾಗುತ್ತಿದೆ. ಇವರಲ್ಲಿ ಸಲಿಂಗಿಗಳು ಇದ್ದಾರೆ ಎಂದು ಸ್ಟ್ರಿಪರ್ ಬ್ರಿಯಾನ್ ಹೇಳುತ್ತಾಳೆ.

ಒಳಚಡ್ಡಿ ಮಾತ್ರ ಉಳಿಸಿಕೊಂಡು ಮಿಕ್ಕಿದ್ದು 'ಸ್ಟ್ರಿಪ್' ಮಾಡಲು 20 ನಿಮಿಷ ಮಾತ್ರ ನಿಗದಿ ಪಡಿಸಲಾಗುತ್ತದೆ. ಇನ್ನು ಹೆಚ್ಚಿಗೆ ತೋರಿಸಬೇಕಾದರೆ ಹೆಜ್ಜೆ ಇಷ್ಟು ಡಾಲರ್ ನಂತೆ ಸುರಿಯಬೇಕಾಗುತ್ತದೆ ಎಂದು ಬ್ರಿಯಾನ್ ಹೇಳುತ್ತಾಳೆ.

ತೀರಾ ಕಡಿಮೆ ಎಂದರೂ 300 ರಿಂದ 400 ಸಿಂಗಪುರ ಡಾಲರ್ ನೀಡದ ಹೊರತೂ ಸಂಪೂರ್ಣ ನಗ್ನ ದರ್ಶನ ಸಾಧ್ಯವಿಲ್ಲ ಎಂದು ತಿಳಿದು ಬಂದಿದೆ.

English summary
Parents in Singapore hire strippers to spice up the birthday parties of their adult children Crystal, a sales supervisor of escort company Urs Truly Escorting Agency said that strippers are usually sought for bachelor or 21st birthday parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X