ಅಕ್ರಮ ಸಂಬಂಧ ಭೀತಿ: ಗರ್ಭಿಣಿ ಅತ್ತಿಗೆ ಸಾಯಿಸಿದ ಭೂಪ

28 ವರ್ಷ ಉಷಾ ಮೃತ ಮಹಿಳೆ. ನವೆಂಬರ್ 11ರಂದು ಮಧ್ಯ ರಾತ್ರಿ ಆಕೆಯ ಮೈದುನ ದೀವಾನ್ ಸಿಂಗ್ ಹತ್ಯೆ ಮಾಡಿದ್ದಾನೆ. 20 ವರ್ಷದ ಆರೋಪಿ, ಓಕ್ಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಕುಕೃತ್ಯ ಎಸಗಿದ್ದಾನೆ. ಮೊದಲು ಆಕೆಯನ್ನು ಐರನ್ ರಾಡು ತೆಗೆದುಕೊಂಡು ತಲೆಗೆ ಹೊಡೆದು ಬಳಿಕ ಆಕೆಯನ್ನು ಉಸಿರುಗಟ್ಟಿಸಿ, ಸಾಯಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದೀವಾನ್ ಪ್ರಾಥಮಿಕ ವಿಚಾರಣೆ ಹಂತದಲ್ಲಿ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ. ಉಷಾ ಗಂಡ ಕುಡುಕನಾಗಿದ್ದು ಅದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರಿಗೆ ತಿಳಿಸಿದ. ಆದರೆ ವಿಚಾರಣೆಯ ಒತ್ತಡ ಹೆಚ್ಚಾಗುತ್ತಿದ್ದಂತೆ ಉಷಾ ಜತೆಗಿನ ಅಕ್ರಮ ಸಂಬಂಧದ ಗಂಟನ್ನು ಬಿಚ್ಚಿದ್ದಾನೆ.
ಉಷಾ ಗಂಡ ಕುಡುಕನಾಗಿದ್ದ. ಅವನಿಲ್ಲದ ವೇಳೆ ಸಮಯ ಸಾಧಿಸಿ ಉಷಾ ಮನೆಗೆ ಹೋಗುತ್ತಿದ್ದೆ. ಅವಳೂ ಸಹಕರಿಸುತ್ತಿದ್ದಳು. ಎಲ್ಲವೂ ಮುಗಿದ ಮೇಲೆ ಒಂದು ದಿನ ನಿನ್ನಿಂದ ತಾನು ಗರ್ಭಿಣಿಯಾಗಿರುವುದಾಗಿ ತಿಳಿಸಿದಳು. ಇದರಿಂದ ನಿಜಕ್ಕೂ ಗಾಬರಿಗೆ ಬಿದ್ದೆ. ಆಗ ಪ್ಲಾನ್ ಮಾಡಿ ಅವಳನ್ನು ಮುಗಿಸಲು ನಿರ್ಧರಿಸಿದೆ ಎಂದು ಪೊಲೀಸರೆದುರು ದೀವಾನ್ ಒಪ್ಪಿಕೊಂಡಿದ್ದಾನೆ.












Click it and Unblock the Notifications