ಶ್ರೀರಾಮುಲು ಚುನಾವಣಾ ಚಿನ್ಹೆ ಸೀಲಿಂಗ್ ಫ್ಯಾನ್

ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಚುನಾವಣಾ ಚಿನ್ಹೆ ಕೂಡಾ ಸೀಲಿಂಗ್ ಫ್ಯಾನ್ ಆಗಿರುವುದು ಕಾಕತಾಳೀಯವೋ ಅಥವಾ ಪೂರ್ವನಿರ್ಧಾರಿತವೋ ರಾಮುಲು ಅವರೇ ಹೇಳಬೇಕು.
ಬಳ್ಳಾರಿ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ 'ಫ್ಯಾನ್' ಚಿನ್ಹೆಯಡಿಯಲ್ಲಿ ಸ್ಪರ್ಧಿಸುವ ಮೂಲಕ ಕರ್ನಾಟಕದಲ್ಲಿ ವೈಎಸ್ ಆರ್ ಕಾಂಗ್ರೆಸ್ ಅಡಿಗಾಲು ಇಡಲಿದೆ ಎಂದು ಸುದ್ದಿ ಹಬ್ಬಿದೆ.
ಅಥವಾ ಗಾಲಿ ಜನಾರ್ದನ ರೆಡ್ಡಿ ಅಣತಿಯಂತೆ ವೈಎಸ್ ಆರ್ ಕುಟುಂಬ ಮೇಲಿನ ಪ್ರೀತ್ಯಾದರಗಳಿಗೆ ಮನ್ನಣೆ ನೀಡಿ ಫ್ಯಾನ್ ಸಿಂಬಲ್ ಆಯ್ಕೆ ಮಾಡಿಕೊಂಡಿರಲೂ ಬಹುದು. ವಿಶೇಷ ಎಂದರೆ ಚುನಾವಣೆ ಆಯೋಗ ಅನುಮತಿ ನೀಡುವ ಮೊದಲೇ ಬಳ್ಳಾರಿಯಲ್ಲಿ ಫ್ಯಾನ್ ಚಿನ್ಹೆಗೆ ಮತ ನೀಡಿ, ಶ್ರೀರಾಮುಲುವನ್ನು ಗೆಲ್ಲಿಸಿ ಎಂದು ಕರಪತ್ರಗಳು ಎಲ್ಲೆಡೆ ಹಂಚಿಕೆಯಾಗಿದೆ.
ಕಣದಲ್ಲಿ ಅಭ್ಯರ್ಥಿಗಳು ಯಾರಿದ್ದಾರೆ: ಬಳ್ಳಾರಿ ಗ್ರಾಮಾಂತರ ಉಪ ಚುನಾವಣಾ ಕಣದಲ್ಲಿ ಒಟ್ಟು 8 ಜನ ಸ್ಪರ್ಧಿಗಳಿದ್ದಾರೆ. ಒಟ್ಟು 20 ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 12 ನಾಮಪತ್ರ ಸ್ವೀಕೃತಗೊಂಡಿತ್ತು.
ಬಿಜೆಪಿಯ ಅಶೋಕ್ ಹಾಗೂ ನಾಗೇಂದ್ರರ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತಗೊಂಡಿತ್ತು. ನ.30ರಂದು ಉಪ ಚುನಾವಣೆಗೆ ಎಲ್ಲಾ ರೀತಿ ಸಿದ್ಧತೆ ಆಗಿದೆ ಎಂದು ಚುನಾವಣಾಧಿಕಾರಿ ಶಶಿಕಾಂತ್ ಸೆಂಥಿಲ್ ಹೇಳಿದ್ದಾರೆ.












Click it and Unblock the Notifications