ಬಳ್ಳಾರಿಯಲ್ಲಿ ಗೆಲ್ಲಲು ಬಿಎಸ್ ವೈ ಫೋಟೊ ಸಾಕು: ರೇಣುಕಾ

ಬಳ್ಳಾರಿ ಉಪ ಚುನಾವಣೆ ಪ್ರಚಾರಕ್ಕೆ ಯಡಿಯೂರಪ್ಪ ಅವರು ಹೋಗುತ್ತಿಲ್ಲ ಎಂದು ಚಿಂತೆ ಮಾಡುವಂತಿಲ್ಲ. ಬಿಎಸ್ ಯಡಿಯೂರಪ್ಪ ಅವರ ಫೋಟೊ ಹಿಡಿದು ಪ್ರಚಾರ ಮಾಡಿದರೆ ಸಾಕು ಜಯ ಕಟ್ಟಿಟ್ಟ ಬುತ್ತಿ. ಯಡಿಯೂರಪ್ಪ ಅವರ ಶಕ್ತಿ ಎಷ್ಟಿದೆ ಎಂಬುದು ಮುಂದೆ ಎಲ್ಲರಿಗೂ ತಿಳಿಯಲಿದೆ ಎಂದು 'ಮುತ್ತು' ಮಿನಿಸ್ಟರ್ ರೇಣುಕಾಚಾರ್ಯ ಹೇಳಿದ್ದಾರೆ.
ಬಿಜೆಪಿ ತೊರೆದು ಬಿ ಶ್ರೀರಾಮುಲು ತಮ್ಮ ಜೀವನದ ಅತಿದೊಡ್ಡ ತಪ್ಪು ಎಸೆಗಿದ್ದಾರೆ. ಚುನಾವಣೆ ನಂತರ ಶ್ರೀರಾಮುಲು ಪಶ್ಚಾತ್ತಾಪಪಡಬೇಕಾಗುತ್ತದೆ. ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರಿಗೆ ಸನ್ಮಾನ ನಡೆದಿದ್ದಕ್ಕಿಂತ ಭರ್ಜರಿಯಾಗಿ ಅಭಿನಂದಿಸಲು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೇಣುಕಾಚಾರ್ಯ ಹೇಳಿದರು.
ಹೆಗ್ಡೆ ಏನೂ ಸಾಚಾ ಅಲ್ಲ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಸಂಬಂಧ ಏನು ಸ್ಪಷ್ಟಪಡಿಸಲಿ. ಲೋಕಾಯುಕ್ತ ಈಗ ಬ್ಲ್ಯಾಕ್ ಮೇಲ್ ಸಂಸ್ಥೆಯಾಗಿದೆ. ನ್ಯಾಯಮೂರ್ತಿ ಹೆಗ್ಡೆ ಆರೋಪ ಮಾಡುವ ಬದಲು ಆಧಾರ ನೀಡಲಿ ಎಂದು ರೇಣುಕಾಚಾರ್ಯ ಕುಟುಕಿದರು.












Click it and Unblock the Notifications