ಬಿಗ್ ಎಫ್ಎಂ ಆರ್ ಜೆ ಮಾನ್ಸಿಗೆ ಮೆಂಟಲ್ ಟಾರ್ಚರ್

ಕೆಲಕಾಲ ರಜೆಯಲ್ಲಿದ್ದ ನಾನು ಕೆಲಸಕ್ಕೆ ಹಿಂತಿರುಗಿದ ಮೇಲೆ ಸ್ಟೇಷನ್ ಮಾಸ್ಟರ್ ರಾಜೀವ್ ಒಬೆರಾಯ್ ನನಗೆ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾನೆ. ನನ್ನ ಸ್ತ್ರೀ ಸಂಬಂಧಿ ಶಸ್ತ್ರಚಿಕಿತ್ಸೆ ಬಗ್ಗೆ ಚರ್ಚಿಸುವಂತೆ ಒತ್ತಡ ಹೇರತೊಡಗಿದ ಎಂದು ಮಾನ್ಸಿ ಆರೋಪ ಹೊರೆಸಿದ್ದಾಳೆ.
23 ವರ್ಷದ ಯುವತಿ ಮಾನ್ಸಿ ನನ್ನ ಸಂಸ್ಥೆಗೆ ಬಂದು ಈ ರೀತಿ ನಡೆದಿದೆ ಎಂದು ದೂರು ನೀಡಿದ್ದಾರೆ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಠಾಣಾಧಿಕಾರಿ ಸೋನಾಲಿ ಸೋನಾ ಹೇಳಿದ್ದಾರೆ. ಆದರೆ, ಮಹಿಳಾ ಆಯೋಗ ಮಾತ್ರ ಲಿಖಿತ ದೂರು ಸಿಗುವ ತನಕ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಕೈಕಟ್ಟಿ ಕೂತಿದೆ.
ಕಳೆದ ತಿಂಗಳು ದೆಹಲಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾನ್ಸಿ ಸುಮಾರು 20 ದಿನಗಳ ಕೆಲಸಕ್ಕೆ ಹಾಜರಾಗಿರಲಿಲ್ಲ. ರಜೆ ಬಗ್ಗೆ ಖ್ಯಾತೆ ತೆಗೆದ ರಾಜೀವ್ ಆಕೆಯನ್ನು ಹೀಯಾಳಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮಾನ್ಸಿ ರಾಜೀನಾಮೆ ನೀಡಿ ಬಿಗ್ ಎಫ್ ಎಂ ಗೆ ಗುಡ್ ಬೈ ಹೇಳಿದ್ದಾಳೆ. ಆದರೆ, ರಾಜೀವ್ ರಾಜೀನಾಮೆ ಸ್ವೀಕರಿಸಿಲ್ಲ.
ಮಾನವ ಹಕ್ಕುಗಳ ಆಯೋಗದ ಕಚೇರಿ ಬಾಗಿಲು ತಟ್ಟಿರುವ ಮಾನ್ಸಿ, ಈ ಪ್ರಕರಣದಲ್ಲಿ ಸಹಾಯ ಕೇಳಿದ್ದಾಳೆ.
ಬಿಗ್ ಎಫ್ ಎಂ ಸ್ಪಷ್ಟನೆ: ಮಾನ್ಸಿ ಒಬೆರಾಯ್ ನಮ್ಮ ಉದ್ಯೋಗಿಯಾಗಿದ್ದಳು ನಿಜ. ಆದರೆ, ಆಕೆ ಕಾರ್ಯಕ್ಷಮತೆ ತುಂಬಾ ಕಡಿಮೆಯಿತ್ತು. ರಜೆ ಬಗ್ಗೆ ಮುಂಚಿತವಾಗಿ ತಿಳಿಸಿರಲಿಲ್ಲ. ರಾಜೀವ್ ಯಾವುದೇ ಮಾನಸಿಕ ಅಥವಾ ದೈಹಿಕ ಕಿರುಕುಳ ನೀಡಿಲ್ಲ.
ಆಕೆ ರಾಜೀನಾಮೆಯನ್ನು ಅಂಗೀಕರಿಸಿದ್ದೇವೆ. ಮಾನ್ಸಿಗೂ ಬಿಗ್ ಎಫ್ ಎಂಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಗ್ ಎಫ್ ಎಂ ವಕ್ತಾರ ಶೆರಿಲ್ ಬಲ್ಡಿಯಾ ಹೇಳುತ್ತಾರೆ.












Click it and Unblock the Notifications