ಅಣ್ಣ ರಾಮು ಬೆಂಬಲಕ್ಕೆ ನಿಂತ ತಂಗಿ ಬಳ್ಳಾರಿ ಶಾಂತಾ
ಬಳ್ಳಾರಿ,
ನ. 10: ನನ್ನ ಸಹೋದರ ಶ್ರೀರಾಮುಲು ಅವರನ್ನು ಭಾರತೀಯ ಜನತಾ ಪಕ್ಷ ಕಡೆಗಣಿಸಿದೆ. ತನ್ನನ್ನು ಬಿಜೆಪಿ ಉಚ್ಚಾಟಿಸಿದರೂ ಸರಿ ನಾನು ಶ್ರೀರಾಮುಲು ಅವರಿಗೆ ಉಪಚುನಾವಣೆಯಲ್ಲಿ ಬೆಂಬಲ ನೀಡುತ್ತೇನೆ ಎಂದು ಬಳ್ಳಾರಿ ಬಿಜೆಪಿ ಸಂಸದೆ ಜೆ. ಶಾಂತಾ ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಸವಾಲೆಸಿದಿದ್ದಾರೆ. id="toptextpromo">ಬಳ್ಳಾರಿ
ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿದ್ದೇವೆ, ನನ್ನ ಅಣ್ಣನನ್ನು ನಾನು ಬೆಂಬಲಿಸುತ್ತೇನೆ. ಪಕ್ಷ ಯಾವುದೇ ಶಿಸ್ತಿನ ಕ್ರಮ ಕೈಗೊಂಡರೂ ನಾನು ಅದಕ್ಕೆ ಜಗ್ಗುವುದಿಲ್ಲ. ಶ್ರೀರಾಮುಲು ಅವರಿಗೆ ಪಕ್ಷ ಸರಿಯಾದ ಗೌರವ ನೀಡಲಿಲ್ಲ. ಜಿಲ್ಲೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ನಮ್ಮ ಪರಿಶ್ರಮವಿದೆ ಎನ್ನುವುದನ್ನು ಪಕ್ಷ ಅರಿತು ಕೊಳ್ಳಬೇಕೆಂದು ಸಂಸದೆ ಸಹೋದರ ಪ್ರೇಮ ಮೆರೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಮ್ಮನ್ನು
ಜಿಲ್ಲೆಯಲ್ಲಿ ರಾಜಕೀಯವಾಗಿ ತುಳಿಯಲು ಬಂದವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಎರಡು ತಿಂಗಳಿನಿಂದ ಜೈಲಿನಲ್ಲಿರುವ ಜನಾರ್ಧನ ರೆಡ್ಡಿಯವರನ್ನು ಪಕ್ಷದ ಯಾವುದೇ ನಾಯಕರುಗಳು ಭೇಟಿ ಮಾಡಲಿಲ್ಲ. ಪಕ್ಷದ ಕಷ್ಟ ಕಾಲದ ಸಮಯದಲ್ಲಿ ಬಂದವರಿಗೆ ಪಕ್ಷ ಕೊಡುವ ಮರ್ಯಾದೆ ಇದೆನೇ? ಎಂದು ಶಾಂತ ಗುರುವಾರ ಬಳ್ಳಾರಿಯಲ್ಲಿ ಬೇಸರ ವ್ಯಕ್ತಪಡಿಸಿದರು.











Click it and Unblock the Notifications