ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪು ಹಣ ಇಲ್ಲ: ಹೆಗ್ಡೆ ಬಾಂಬ್

ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯ ಕಪ್ಪುಹಣ ಇದೆ ಎನ್ನುವುದು ಮೂರ್ಖತನ ಮಾತಾಗುತ್ತದೆ. ಈ ವೇಳೆಗೆ ಎಲ್ಲಾ ಹಣವನ್ನು ಬೇರೆಡೆ ಸಾಗಿಸಲಾಗಿರುತ್ತದೆ. ನನಗೆ ಲಭ್ಯವಿರುವ ಮಾಹಿತಿ ಪ್ರಕಾರ ಸ್ವಿಸ್ ಬ್ಯಾಂಕ್ ನಲ್ಲಿ ಕಪ್ಪುಹಣ ಉಳಿದಿಲ್ಲ ಎಂದು ಸುಪ್ರೀಂಕೋರ್ಟ್ ನ ನಿವೃತ್ತಿ ನ್ಯಾಯಮೂರ್ತಿ ಹೆಗ್ಡೆ ಹೇಳಿದ್ದಾರೆ.
ಕಪ್ಪುಹಣ ಭಾರತಕ್ಕೆ ವಾಪಾಸ್ ತರುವಲ್ಲಿ ಕೇಂದ್ರ ಸರ್ಕಾರ ಅನುಸಸಿಸುತ್ತಿರುವ ವಿಳಂಬ ಧೋರಣೆ ನೋಡಿದರೆ ಗಣ್ಯಾತಿಗಣ್ಯರು ಇದರಲ್ಲಿ ಹಣ ತೊಡಗಿಸಿರುವುದನ್ನು ಗಮನಿಸಬಹುದಾಗಿದೆ.
ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಭಾರತೀಯ ಹೆಸರು ಬಹಿರಂಗಪಡಿಸಲು ಸರ್ಕಾರ ಹೆದರುತ್ತಿರುವುದು ಏಕೆ? ಎಂದು ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರಶ್ನಿಸಿದ್ದಾರೆ.
2008ರಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಒಟ್ಟಾರೆ 1,456 ಬಿಲಿಯನ್ ಯುಎಸ್ ಡಾಲರ್ ಇತ್ತು ಎನ್ನಲಾಗಿದೆ. ಈಗಲೂ ಅಷ್ಟೇ ಮೊತ್ತ ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತ ಇದೆ ಎನ್ನುವುದು ಮೂರ್ಖತನದ ಮಾತು ಎಂದು ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications