ಬೆಂಗ್ಳೂರಿನ ಮರಾಠಿಗರಿಂದ ಕನ್ನಡ ರಾಜ್ಯೋತ್ಸವ ಆಚರಣೆ

Kshatriya Maratha Community is celebrating Kannada Rajyotsava
ಬೆಂಗಳೂರು, ನ.9: ಕರ್ನಾಟಕ ಕ್ಷತ್ರೀಯ ಮರಾಠ ಒಕ್ಕೂಟದಿಂದ ಕನ್ನಡ ರಾಜ್ಯೋತ್ಸವವನ್ನು ನ.9ರಂದು ಸಂಭ್ರಮದಿಂದ ಆಚರಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಶ್ಯಾಮ್ ಸುಂದರ್ ಗಾಯಕ್ ವಾಡ್ ಹೇಳಿದ್ದಾರೆ.

ಕರ್ನಾಟಕದಲ್ಲಿ ನೆಲೆಸಿರುವ ಮರಾಠರೆಲ್ಲರೂ ಒಂದೇ. ಈ ನೆಲ, ಜಲದಲ್ಲಿ ನಾವುಗಳು ಬದುಕುತ್ತಿರುವುದರಿಂದ ಸಾಮರಸ್ಯ, ಸಹಬಾಳ್ವೆಯನ್ನು ಮೈಗೂಡಿಸಿಕೊಳ್ಳಬೇಕು. ನಾಡಿನ ಪರ ಇರಬೇಕು ಎಂದು ನಮ್ಮ ಧ್ಯೇಯ ಎಂದು ಶ್ಯಾಮ್ ಸುಂದರ್ ಹೇಳಿದರು.

ಬೆಳಗಾವಿಯಲ್ಲಿ ಎಂಇಎಸ್ ನವರು ಕರ್ನಾಟಕ ರಾಜ್ಯೋತ್ಸವ ದಿನ ಪ್ರತಿಭಟನೆ ನಡೆಸಿರುವುದು ವಿಷಾದನೀಯ. ಕರ್ನಾಟಕದಲ್ಲಿ ಲಕ್ಷಾಂತರ ಮಂದಿ ಮರಾಠಿಗರಿದ್ದು, ಕನ್ನಡ ನೆಲದಲ್ಲಿ ನೆಲೆಸಿರುವುದಕ್ಕೆ ಹೆಮ್ಮೆಪಡಬೇಕು ಎಂದರು.

ನ.9 ರಂದು ರಾಜ್ಯೋತ್ಸವದ ಜೊತೆಗೆ ರಾಜ್ಯ ಕ್ಷತ್ರೀಯ ಮರಾಠರ ಸಮಾವೇಶವು ನದೆಯಲಿದೆ. ಬುಲ್ ಟೆಂಪಲ್ ರಸ್ತೆಯ ಮರಾಠ ಹಾಸ್ಟೆಲ್ ಆವರಣದಲ್ಲಿ ನಡೆಯುವ ಬೃಹತ್ ಸಮಾವೇಶವನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಉದ್ಘಾಟಿಸಲಿದ್ದಾರೆ.

ಸಚಿವ ಜಗದೀಶ್ ಶೆಟ್ಟರ್, ಮಾಜಿ ಸಚಿವ ಪಿಜಿಆರ್ ಸಿಂಧ್ಯ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಆರ್ ವಿ ದೇಶಪಾಂಡೆ, ಟಿಎಸ್ ರಾಣೆ, ಸಂಸದ ಅನಿಲ್ ಲಾಡ್, ತಂಜಾವೂರಿನ ರಾಜ ವಂಶಸ್ಥ ರಾಜೇಭೌಂಸ್ಲೆ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದು ಶ್ಯಾಮ್ ಸುಂದರ್ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+