• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾರುಖ್ ಬಕ್ರಾ ಬೆಲೆ ಕೇವಲ 1.5 ಲಕ್ಷ ರೂ!

By Mahesh
|

ದೆಹಲಿಯಲ್ಲಿ ಸಲ್ಮಾನ್‌ ಮತ್ತು ಶಾರುಖ್‌ ಬಕ್ರಾಗಳಿಗೆ ತಲಾ 1.50 ಲಕ್ಷ ರೂಗೆ ಸೇಲ್ ಆದ ಸುದ್ದಿ ಬಂದಿದೆ. ಬೆಂಗಳೂರಿನಲ್ಲಿ ಮಾತ್ರ ಪ್ರತಿವರ್ಷದಂತೆ ಈ ವರ್ಷ ಕೂಡಾ ಶಾರುಖ್ ಖಾನ್ ಬಕ್ರಾ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಇಲ್ಲಿ ಬೆಲೆ ಲಕ್ಷ ಮುಟ್ಟದಿದ್ದರೂ 50,000 ತನಕ ಹರಾಜು ಕೂಗುವವರಿದ್ದಾರೆ.

ಒಂದು ಕುರಿಗೆ ಎಷ್ಟು ರೇಟ್ ಇರಬಹುದು ಹೇಳಿ? ನಿಮ್ಮ ಊಹೆಗೂ ನಿಲುಕದಂತೆ ದರ ಗಗನವನ್ನು ಮುಟ್ಟುತ್ತದೆ. ಅದರಲ್ಲೂ ಬನ್ನೂರು ಕುರಿ ಕೊಂಡವನೇ ಶ್ರೀಮಂತ ಎನ್ನಬಹುದು. ಸಾಧಾರಣ ಕುರಿಗೆ 2,000 ದಿಂದ ಶುರುವಾಗುವ ಧಾರಣೆ, ಸ್ಪೆಷಲ್ ಕುರಿ ಬೆಲೆ 8,000 ರಿಂದ 10,000 ಸಾವಿರ ತನಕ ಮುಟ್ಟುತ್ತದೆ. ಬಿಡುವಿದ್ದರೆ ಚಾಮರಾಜಪೇಟೆ ಈದ್ಗಾ ಮೈದಾನ, ಶಿವಾಜಿನಗರ, ಮಾಗಡಿ ರಸ್ತೆ ಬಳಿಯ ಕುರಿ ಅಡ್ಡಾಗೆ ಒಮ್ಮೆ ಭೇಟಿ ಕೊಡಿ.

ಕುರಿ ಬೆಲೆ ನಿರ್ಧಾರ, ಆಯ್ಕೆ ಹೇಗೆ?: ಮೊದಲೇ ಹೇಳಿದಂತೆ ಒಳ್ಳೆ ತುಪ್ಪಟ ಇರೋ ಕುರಿಗೆ ಸಲ್ಮಾನ್, ಶಾರುಖ್, ಲಾಲೂ, ದೇವರ ಕೂಸು(ಉರ್ದುವಿನಲ್ಲಿ ಏನೋ ಹೇಳಿದ ಗೊತ್ತಿಲ್ಲ) ಟೈಗರ್ ಪ್ರಭಾಕರ್ ಹೆಸರುಗಳನ್ನು ಇಡುತ್ತಾರೆ. ಸ್ವಲ್ಪ ನಕ್ರಾ ಮಾಡೊ ಬಕ್ರಾಗಳಿಗೆ ವಿಲನ್ ಗಳ ಹೆಸರು ಖಾಯಂ.

ಕುರಿ ತಜ್ಞ(ಇವನ ಸಹಾಯವಿಲ್ಲದಿದ್ದರೆ ನೀವು ಬಕ್ರಾ ಆಗೋದು ಖಂಡಿತಾ)ನ ಜತೆ ಹೋಗಿ ವ್ಯಾಪಾರ ಕುದುರಿಸಬೇಕು. ದಲ್ಲಾಳಿ ಇಲ್ಲದೆ ವ್ಯಾಪಾರ ಮಾಡಿದರೆ ನೀವು ಬಕ್ರಾ ಆಗುವುದು ಗ್ಯಾರಂಟಿ. ದಲ್ಲಾಳಿ ಕುರಿಯ ಕಿವಿ, ಕತ್ತು, ಹಲ್ಲು, ಮರ್ಮಾಂಗ ಭಾಗದಲ್ಲಿ ಮುಟ್ಟಿ, ಬೇಕಾದ ಪರೀಕ್ಷೆ ಮಾಡಿ ಆ ಕುರಿಯ ಯೋಗ್ಯತೆಯನ್ನು, ಬೆಲೆಯನ್ನು ನಿರ್ಧರಿಸುತ್ತಾನೆ.

ಉತ್ತರ ಭಾರತದಲ್ಲಿ ಕುರಿಗಳ ರೇಟು ಲಕ್ಷ ದಾಟುತ್ತೆ ಸಾಬ್, ಸುಮಾರು ಒಂದೂವರೆ ವರ್ಷದ 50 ಕೆಜಿ ಬಕ್ರಾ 1.5 ಲಕ್ಷಗೆ ಹೋಗಿದೆ ಅಂತಾನೆ ಚಾಮರಾಜಪೇಟೆ ರಫೀಕ್. ಅವನ ಮಾತು ಸರಿಯೇ ಕಳೆದ ವರ್ಷ ಉತ್ತರ ಪ್ರದೇಶದಲ್ಲಿ ಶಾರುಖ್ ಹೆಸರಿನ ಬಕ್ರಾ ಬರೋಬ್ಬರಿ 4.5 ಲಕ್ಷಕ್ಕೆ ಸೇಲ್ ಆಗಿತ್ತು.

ಸರಿ ಯಾವ ಹೆಸರಿಟ್ಟಿದ್ರೀ ಅದಕ್ಕೆ ಅಂದ್ರೆ. ಸಲ್ಮಾನ್ , ಶಾರುಖ್ ಬಕ್ರಾಗಳಿಗೆ ಬಹುತ್ ಡಿಮ್ಯಾಂಡ್ ಸಾಬ್ ಅಂದ.

ಕುರಿಗಳ ಜೊತೆಗೆ ಬಡಕಲು ಮೇಕೆಗಳಿಗೂ ಬೇಡಿಕೆ ಬಂದು ಬಿಡುತ್ತದೆ. 30-40 ಕೆಜಿ ಮೇಕೆಗಳಿಗೆ 4 ರಿಂದ 6 ಸಾವಿರ ಬೆಲೆ ಇದೆ. ಹಬ್ಬದ ದಿನ ಬಕ್ರಾ ಬಡಿದು ಬಿರಿಯಾನಿ ಮಾಡಿ ಹೊಟ್ಟೆ ಪೂಜೆ ಆಗದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತೆ ಸಾಬ್ ಹೇಳಿ ನಿಮ್ಗೆ ಯಾವುದು ಕೊಡ್ಲಿ ಎಂದು ಮುಂದಿನ ಗಿರಾಕಿಯತ್ತ ತಿರುಗಿದ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With the whole country celebrating Eid-ul-zuha, the tradition of sacrificing an animal, the most expensive goat this year is priced at a whopping amount of Rs 1.5 lakh. This year also Shahrukh and Salman goats with six pack tag are having highest demand in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more