ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ್ಳೂರಲ್ಲಿ ಶಾರುಖ್, ಸಲ್ಮಾನ್ ಬಕ್ರಾಗೆ ಬೇಡಿಕೆ ಹೆಚ್ಚು

By Mahesh
|
Google Oneindia Kannada News

Eid-ul-zuha Sacrificing goat
ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಅಥವಾ ಈದ್ ಉಲ್ ಜುಹಾ ಜಗತ್ತಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸುತ್ತಮುತ್ತ ಸಂಭ್ರಮಕ್ಕೆ ಸಾಟಿಯಿಲ್ಲ.

ಸೋಮವಾರ ಬೆಳಗ್ಗಿನಿಂದಲೇ ಗಣ್ಯಾತಿಗಣ್ಯರು, ಶ್ರೀಸಾಮಾನ್ಯರು ಈದ್ಗಾ ಮೈದಾನದಲ್ಲಿ ಬಂದು ಪ್ರಾರ್ಥನೆ ಸಲ್ಲಿಸಿ ನೆಚ್ಚಿನ ಮೇಕೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಆಪ್ತ ಜಮೀರ್ ಅಹ್ಮದ್ ಜೊತೆ ಸೇರಿ ಈದ್ಗಾ ಮೈದಾನದಲ್ಲಿ ಕಾಣಿಸಿಕೊಂಡ ಪ್ರಮುಖರು.

ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗ ಇಸ್ಮಾಯಿಲ್ ಅವರನ್ನು ಬಲಿದಾನಕ್ಕೆ ಸಜ್ಜುಗೊಳಿಸಲು ಜನತೆ ಸಿದ್ಧರಾಗಿರುತ್ತಾರೆ. ಸರ್ವಶಕ್ತನ ಮೊರೆಗೆ ಓಗೊಟ್ಟಿದ್ದರ ಸಂಕೇತವಾಗಿ ಕುರಿ, ಮೇಕೆ (ಹಸು, ಕರು ಬಲಿ ಈಗ ನಿಷೇಧ)ಗಳನ್ನು ಬಲಿಕೊಡಲು ಸಜ್ಜಾಗುತ್ತಾರೆ.

ರಂಜಾನ್ ತಿಂಗಳಲ್ಲಿ ರೋಜಾ(ಉಪವಾಸ) ಮಾಡಿ ದಣಿದ ಉದರಗಳನ್ನು ಕೊಬ್ಬಿದ ಕುರಿ ಮಾಂಸದ ಛರ್ಬಿಯನ್ನು ಕತ್ತರಿಸುವುದರ ಮೂಲಕ ಸಂತಸಗೊಳಿಸಲಾಗುತ್ತದೆ.

ಸಿಕ್ಸ್ ಪ್ಯಾಕ್ ಬಕ್ರಾ ಹೇ ಕ್ಯಾ?: ಬಕ್ರೀದ್ ಬಂದರೆ ಸಲ್ಮಾನ್, ಶಾರುಖ್, ಲಾಲೂ, ಟೈಗರ್ ಸೇರಿದಂತೆ ಹಲವು ಸ್ಟಾರ್ ಬಕ್ರಾಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗುತ್ತದೆ. ಈ ಬಾರಿ ಸಿಕ್ಸ್ ಪ್ಯಾಕ್ ಬಕ್ರಾಗಳಿಗೆ ಬೇಡಿಕೆ ಉಂಟಾಗಿದೆ. ಸಲ್ಮಾನ್, ಶಾರುಖ್ ಸೇರಿದಂತೆ ಸಿಕ್ಸ್ ಪ್ಯಾಕ್ ಉಳ್ಳ ಬಾಲಿವುಡ್ ನಟರ ಹೆಸರಿನಲ್ಲಿ ಬಕ್ರಾಗಳು ಅಲಂಕಾರಗೊಂಡಿರುತ್ತದೆ.

ಆಕಾರ, ರೂಪಕ್ಕೆ ತಕ್ಕಂತೆ ಹೆಸರು ಇಟ್ಟು ಗಿರಾಕಿಯನ್ನು ಆಕರ್ಷಿಸುತ್ತಾರೆ. ಮಟನ್ ಸ್ಟಾಲ್ ಗೆ ಹೋಗಿ ಕುರಿ ಮಾಂಸ ತಂದು ತಿನ್ನುವುದು ಸಾಮಾನ್ಯ ಸಂಗತಿ. ಆದರೆ ಬಕ್ರೀದ್ ವೇಳೆಯಲ್ಲಿ ಕುರಿಯನ್ನು ಕೊಂಡು ತಂದು ಬೇಕಾದ ರೀತಿಯಲ್ಲಿ ಬಳಸುವುದು ವಿಶೇಷ. ಕುರಿಯ ಮಾಂಸ ಹೊಟ್ಟೆ ತುಂಬಿಸಿದರೆ, ಚರ್ಮ, ಗೊಬ್ಬರ, ಹಾಲು ಬೇರೆ ಉಪಯೋಗಕ್ಕೆ ಬರುತ್ತದೆ.

ಶಾರುಖ್ ಬಕ್ರಾಗಳಿಗೆ ಬಹೋತ್ ಡಿಮ್ಯಾಂಡ್ ಸಾಬ್..? ಮುಂದೆ ಓದಿ

English summary
With the whole country celebrating Eid-ul-zuha, the tradition of sacrificing an animal, the most expensive goat this year is priced at a whopping amount of Rs 1.5 lakh. This year also Shahrukh and Salman goats with six pack tag are having highest demand in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X