ಎಸ್ ಬಿಐ ಮುಷ್ಕರ ಮುಂದೂಡಿಕೆ, ಗ್ರಾಹಕ ರಿಲೀಫ್

ನವೆಂಬರ್ 8 ಮತ್ತು 9ರಂದು ದೇಶಾದ್ಯಂತ ಮುಷ್ಕರ ಹೂಡಲು ನಿರ್ಧರಿಸಲಾಗಿತ್ತು. ರಾಜ್ಯದಲ್ಲಿ ಮಂಚೂಣಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿ ಎಸ್ ಬಿಐ ಒಕ್ಕೂಟದ 13,560 ಬ್ಯಾಂಕ್ ಬ್ರ್ಯಾಂಚ್ ಗಳ ವಹಿವಾಟುಗಳಲ್ಲಿ ತೀವ್ರ ವ್ಯತಯವಾಗುವ ಭೀತಿ ಎದರಾಗಿತ್ತು.
ನವೆಂಬರ್ 6 (ಭಾನುವಾರ), 7 (ಬಕ್ರೀದ್ ರಜಾ) ಮತ್ತು 8, 9 (ಮುಷ್ಕರ) 10 ರಂದು ಕೆಲವೆಡೆ ಗುರುನಾನಕ್ ಜಯಂತಿ ರಜೆ ಇದೆ. ಹೀಗಾಗಿ ಮುಂದಿನ ವಾರಕ್ಕೆ ಮುಷ್ಕರ ಮುಂದೂಡುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ. ಈ ಬಗ್ಗೆ ಅಧಿಕೃತವಾಗಿ AISBOF ಹೇಳಿಕೆ ನೀಡಲಿದ್ದು, ಸದ್ಯಕ್ಕಂತೂ ನ.8,9ರಂದು ಮುಷ್ಕರ ನಡೆಯುತ್ತಿಲ್ಲ.
ಆಡಳಿತ ವರ್ಗದ ಏಕಪಕ್ಷೀಯ ಧೋರಣೆ, ನಿವೃತ್ತ ಅಧಿಕಾರಿಗಳ ಪಿಂಚಣಿ ಪರಿಷ್ಕರಣೆ, ಅಧಿಕಾರಿಗಳ ವರ್ಗಾವಣೆ ನೀತಿ, ಬಡ್ತಿಯ ನಂತರ ಸೂಕ್ತ ವೇತನ ನಿಗದಿ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಅಧಿಕಾರಿಗಳು ಮುಷ್ಕರಕ್ಕೆ ಮುಂದಾಗಿದ್ದಾರೆ.












Click it and Unblock the Notifications