ಶಾಸಕ ಮುನಿರಾಜು ಮೇಲೆ FIR, ಸೆರೆ ಯಾವಾಗ?

ಕೆರೆಗುಡ್ಡದಹಳ್ಳಿ ನಿವಾಸಿ ಪುಟ್ಟಸ್ವಾಮಿ ಎಂಬವರು ಸಲ್ಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿ ಶಾಸಕ ಮುನಿರಾಜು ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೂಚನೆ ನೀಡಿತ್ತು.
ಭಷ್ಟಾಚಾರ ನಿಯಂತ್ರಣ ಕಾಯ್ದೆ(ಪಿಸಿಎ) ಸೆಕ್ಷನ್ 9, 10 ಮತ್ತು 13 ಮತ್ತು ಭಾರತೀಯ ದಂಡ ಸಂಹಿತೆ ಕಾಯ್ದೆ ಸೆಕ್ಷನ್ 120, 468, 428 ಮತ್ತು 471ರ ಅಡಿಯಲ್ಲಿ ಆರೋಪಿಯಾಗಿರುವ ಮುನಿರಾಜು ಶೀಘ್ರವೇ ಪರಪ್ಪನ ಅಗ್ರಹಾರ ಜೈಲಿನ ದರ್ಶನ ಮಾಡುವ ಸಾಧ್ಯತೆಗಳು ನಿಚ್ಚಳವಾಗಿದೆ.
ಪ್ರಕರಣದ ವಿಚಾರಣೆಗಾಗಿ ಶಾಸಕ ಮುನಿರಾಜು ಅವರನ್ನು ಪೊಲೀಸರು ಬಂಧಿಸಬಹುದಾಗಿದೆ. ಪೊಲೀಸರು ತನಿಖಾ ವರದಿಯನ್ನು ನ.19ರೊಳಗೆ ಲೋಕಾಯುಕ್ತ ಕೋರ್ಟ್ ಗೆ ಸಲ್ಲಿಸಬೇಕಿದೆ. ಹಾಗಾಗಿ ಅಲ್ಲಿವರೆಗೂ ಮುನಿರಾಜು ಅವರು ಸ್ವಲ್ಪ ನೆಮ್ಮದಿಯಿಂದ ಉಸಿರಾಡಬಹುದಾದರೂ ವಿಚಾರಣೆಯನ್ನು ತಪ್ಪಿಸಿಕೊಳ್ಳುವಂತಿಲ್ಲ.












Click it and Unblock the Notifications