ಲವರ್ ನ ಮುಖ ನೋಡಿ ಅತ್ತಿಗೆ ಕೊಂದ ಪ್ರೇಮಿ

ಮೈದುನ ತನ್ನ ಅತ್ತಿಗೆಯನ್ನೇ ಹತ್ಯೆ ಮಾಡಿದ ಘಟನೆ ಆರ್ ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಂಗಾನಗರ ನಿವಾಸಿ ಶೋಭಾ(30) ಎಂಬುವವರು ಸ್ಟುಡಿಯೋ ನಡೆಸುವ ಶ್ರೀನಿವಾಸಪುರದ ನಿವಾಸಿ ವರದರಾಜು ಎಂಬುವವರನ್ನು ವಿವಾಹವಾಗಿ 8 ವರ್ಷದ ನಂತರ ಈ ದುರಂತ ಸಂಭವಿಸಿದೆ.
ಮೈದುನ ಮೋಹನ್ ಜೊತೆ ಅತ್ತಿಗೆ ಮುಳಬಾಗಿಲು ಮೂಲದ ಶೋಭಾ ಸದಾ ಜಗಳವಾಡುತ್ತಿದ್ದರು. ಆಗಾಗ ಮನೆ ಬಿಟ್ಟು ಹೋಗುವುದಾಗಿ ಮೋಹನ್ ಬೆದರಿಕೆ ಹಾಕುತ್ತಿದ್ದ. ಆದರೆ, ಅಣ್ಣನ ಒತ್ತಾಯದಿಂದ ಮನೆಗೆ ಹಿಂತಿರುಗುತ್ತಿದ್ದ ಎನ್ನಲಾಗಿದೆ.
ಇತ್ತೀಚೆಗೆ ಮೋಹನ್ ಗೆ ಯುವತಿಯೊಬ್ಬಳ ಮೇಲೆ ಪ್ರೇಮಾಂಕುರವಾಗಿತ್ತು. ಆಗಾಗ ಆಕೆಯನ್ನು ಮನೆಗೆ ಕರೆತರುತ್ತಿದ್ದ. ಇದಕ್ಕೆ ಅತ್ತಿಗೆ ಶೋಭಾ ಆಕ್ಷೇಪ ವ್ಯಕ್ತಪಡಿಸಿ, ಇದೇನು ಹೋಟೆಲ್ ಲಾಡ್ಜ್ ಅಲ್ಲ ಎಂದು ಹೇಳಿ ತರಾಟೆ ತೆಗೆದುಕೊಂಡಿದ್ದರು.
ಇದರಿಂದ ಕೋಪಗೊಂಡ ಮೈದುನ ಮೋಹನ್ ಅತ್ತಿಗೆ ಜೊತೆ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಮೋಹನ್ ಚಾಕುವಿನಿಂದ ಅತ್ತಿಗೆಯ ಕುತ್ತಿಗೆ ಕೊಯ್ದಿದ್ದಾನೆ. ನಂತರ ತನ್ನ ಅಣ್ಣನಿಗೆ ಅತ್ತಿಗೆ ಸತ್ತಿರುವ ಸುದ್ದಿ ತಿಳಿಸಿ ಅಲ್ಲಿಂದ ಓಡಿ ಹೋಗಿದ್ದಾನೆ. ಆರ್ ಟಿ ನಗರ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸಿದ್ದಾರೆ.












Click it and Unblock the Notifications