ನೇಣಾಗಿ ಬಾಲಕಿಯನ್ನು ಬಲಿ ತೆಗೆದ ಅಮ್ಮನ ಶಾಲು
ಮಡಿಕೇರಿ,
ನ. 3 : ಅಮ್ಮನ ಶಾಲ್ ಜೊತೆ ಆಟವಾಡುತ್ತಿದ್ದ 6ನೇ ತರಗತಿ ವಿದ್ಯಾರ್ಥಿನಿ ಅಕಸ್ಮಾತಾಗಿ ಉಸಿರುಗಟ್ಟಿ ಸಾವಿಗೀಡಾದ ದಾರುಣ ಘಟನೆ ಮಡಿಕೇರಿ ಜಿಲ್ಲೆಯ ಸೋಮವಾರಪೇಟೆಯಲ್ಲಿ ಬುಧವಾರ ನಡೆದಿದೆ. id="toptextpromo">ತಾಯಿಯ
ಶಾಲನ್ನು ಜೋಕಾಲಿಯನ್ನಾಗಿ ಮಾಡಿಕೊಂಡು ಬಾಲಕಿ ಆಟವಾಡುತ್ತಿದ್ದಳು. ಅದೇ ತನ್ನ ಸಾವಿಗೆ ಕಾರಣವಾಗುತ್ತದೆಂಬ ಪರಿಕಲ್ಪನೆಯೂ ಆಕೆಗಿರಲಿಲ್ಲ. ಅದೇ ಶಾಲು ಆ ಬಾಲಕಿಯ ಕುತ್ತಿಗೆಗೆ ಸುತ್ತಿಕೊಂಡು ನೇಣಾಗಿ ಬಲಿತೆಗೆದುಕೊಂಡಿದೆ. id='are-slot-1' class='oiad oi-axt oiadv'> id='top-searched-articles'>ಇದನ್ನು
ಗಮನಿಸಿದ ಆಕೆಯ ಸಹೋದರ ಆಕೆಯನ್ನು ಪಾರುಮಾಡಲು ಯತ್ನಿಸಿದ್ದಾನೆ. ಸಾಧ್ಯವಾಗದಿದ್ದಾಗ ಕಾಪಾಡಿ ಎಂದು ಕೂಗಿ ಕರೆದಿದ್ದಾನೆ. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಬಾಲಕಿ ಕೊನೆಯುಸಿರೆಳೆದಿದ್ದಾಳೆ.











Click it and Unblock the Notifications