ಹೆಂಡತಿಗೆ ಸ್ಟಿರಾಯಿಡ್ ನೀಡಿದ ಇವ ಗಂಡನಲ್ಲ ಭಂಡ

ಆದರೆ, ಅನಿವಾಸಿ ಭಾರತೀಯ ಇದಕ್ಕೆ ತದ್ವಿರುದ್ಧ. ತನ್ನ ಹೆಂಡತಿ ಕುರೂಪಿಯಾಗಿರಬೇಕು, ಸದಾಕಾಲ ಅಡುಗೆ ಮಾಡುತ್ತ ಮನೆಯಲ್ಲೇ ಇರಬೇಕೆಂದು ಅವಳಿಗೆ ಗೊತ್ತಿಲ್ಲದಂತೆ ದಪ್ಪಗಾಗಲು ಸ್ಟಿರಾಯಿಡ್ ನೀಡುತ್ತಿದ್ದ. ಧಡೂತಿಯಾಗಿದ್ದರೆ ಮನೆಯಲ್ಲೇ ಬಿದ್ದಿರುತ್ತಾಳೆಂಬ ದುರಾಲೋಚನೆ.
ಈ ಅಪರಾಧಕ್ಕಾಗಿ ಗಂಡ ಈಗ ಜೈಲು ಸೇರುವಂತಾಗಿದೆ. ಲೀಸ್ಟರ್ ನಲ್ಲಿ ವಾಸವಿರುವ ದಲ್ವಾರಾ ಸಿಂಗ್ ತನ್ನ ಹೆಂಡತಿಯ ಆಹಾರದಲ್ಲಿ ಪಾನೀಯದಲ್ಲಿ ಗುಪ್ತವಾಗಿ ಮಾದಕ ವಸ್ತು ಸೇರಿಸುತ್ತಿದ್ದ. ಅದನ್ನು ಸೇವಿಸಿದ ಆಕೆಯ ಮುಖ ಮತ್ತು ಬೆನ್ನ ಮೇಲೆಲ್ಲ ಕೂದಲು ಬೆಳೆದವು. ಚರ್ಮ ಜೋಲುಜೋಲಾಯಿತು.
ಇದನ್ನು ತನ್ನ ಗಂಡನ ಗಮನಕ್ಕೆ ತಂದು ವೈದ್ಯರ ಬಳಿ ಹೋಗಬೇಕೆಂದಾಗ, ಸುಮ್ಮನೆ ಇಂಥದಕ್ಕೆಲ್ಲ ಚಿಂತೆ ಮಾಡಬೇಡು ಎಂದು ಸಾಗಹಾಕಿದ್ದಾನೆ. ಇವನ ಕೃತ್ಯವನ್ನು ಕಂಡುಹಿಡಿದಿದ್ದು ಆತನ ಮಗಳು. ಹೆಂಡತಿ ಪರಿಶೀಲಿಸಿದಾಗ ಮಾದಕ ವಸ್ತು ನೀಡುತ್ತಿದ್ದುದು ತಿಳಿದುಬಂದಿದೆ. ಇದು ಕೋರ್ಟ್ ಮೆಟ್ಟಿಲೇರಿ, ವಿಚಾರಣೆ ನಡೆಸಿದಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಅವನಿಗೆ 1 ವರ್ಷ ಜೈಲು ಶಿಕ್ಷೆ ವಿಧಿಸಿದೆ.












Click it and Unblock the Notifications