ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ

By Prasad
|
Google Oneindia Kannada News

Karnataka Madhyama Academy Awards
ಬೆಂಗಳೂರು, ನ. 3 : 2010 ಮತ್ತು 2011ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಹಿರಿಯ ಪತ್ರಕರ್ತರಾದ ಜಿಎನ್ ರಂಗನಾಥರಾವ್ ಮತ್ತು ಅರಕೆರೆ ಜಯರಾಂ ಅವರಿಗೆ ಅನುಕ್ರಮವಾಗಿ 2010 ಮತ್ತು 2011ನೇ ಸಾಲಿನ ವಿಶೇಷ ಪ್ರಶಸ್ತಿ ಸಂದಿದೆ.

ಹಾಗೆಯೆ, ವರ್ಷದ ವ್ಯಕ್ತಿ, ಮೈಸೂರು ದಿಗಂತ, ಆಂದೋಲನ, ಅಭಿಮಾನಿ ಪ್ರಶಸ್ತಿಗಳನ್ನು ಕೂಡ ಪ್ರಕಟಿಸಲಾಗಿದ್ದು, ವೃತ್ತಪತ್ರಿಕೆ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಸೇವೆಗೈದಿರುವ 38 ಪತ್ರಕರ್ತರಿಗೆ ಗೌರವ ಪ್ರಶಸ್ತಿಯನ್ನು ನೀಡಲಾಗಿದೆ. ಅಕಾಡೆಮಿಯ ಅಧ್ಯಕ್ಷ ಡಿ.ಪಿ. ಪರಮೇಶ್ವರ್ ಅವರ ಈ ಪ್ರಶಸ್ತಿಗಳನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.

ಎಂದಿನಂತೆ ಇಂಟರ್ನೆಟ್ ಮಾಧ್ಯಮದಲ್ಲಿ ಗಣನೀಯವಾಗಿ ಕೆಲಸ ಮಾಡಿರುವ ಪತ್ರಕರ್ತರನ್ನು ಕಡೆಗಣಿಸಲಾಗಿದೆ. ಕಾಕತಾಳೀಯವೆಂಬಂತೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ವೆಬ್ ಸೈಟ್ ಕೂಡ ಅಂತರ್ಜಾಲದಲ್ಲಿ ನಿಷ್ಕ್ರಿಯವಾಗಿದೆ.

ಪ್ರಶಸ್ತಿ ಪುರಸ್ಕೃತರ ವಿವರಗಳನ್ನು ಕೆಳಗಿನಂತಿವೆ.

ವಿಶೇಷ ಪ್ರಶಸ್ತಿ

ಜಿ.ಎನ್. ರಂಗನಾಥರಾವ್, ಹಿರಿಯ ಪತ್ರಕರ್ತರು, 2010
ಅರಕೆರೆ ಜಯರಾಂ, ಹಿರಿಯ ಪತ್ರಕರ್ತರು, 2011

ವರ್ಷದ ವ್ಯಕ್ತಿ ಪ್ರಶಸ್ತಿ

ಎಸ್.ಆರ್. ರಾಮಸ್ವಾಮಿ, ಹಿರಿಯ ಪತ್ರಕರ್ತರು, 2010
ಹುಣಸವಾಡಿ ರಾಜನ್, ಸಂಪಾದಕರು, ಸಂಯುಕ್ತ ಕರ್ನಾಟಕ, 2011

ಮೈಸೂರು ದಿಗಂತ ಪ್ರಶಸ್ತಿ ಪುರಸ್ಕೃತರು

ಭಾರತಿ ಹೆಗಡೆ, ಉದಯವಾಣಿ, 2010
ಟಿ.ಎಲ್ ಶ್ರೀನಿವಾಸ್, ಕನ್ನಡ ಪ್ರಭ, 2011

ಆಂದೋಲನ ಪ್ರಶಸ್ತಿ ಪುರಸ್ಕೃತರು

ಲೋಕದರ್ಶನ ದಿನ ಪತ್ರಿಕೆ, ಬೆಳಗಾವಿ, 2010
ಸುದ್ದಿ ಬಿಡುಗಡೆ ಪತ್ರಿಕೆ, ಸುಳ್ಯ, 2011

ಅಭಿಮಾನಿ ಪ್ರಶಸ್ತಿ

ಎಸ್.ಎನ್. ಸುರೇಶ್, ಸಂಯುಕ್ತ ಕರ್ನಾಟಕ, 2010
ಕೆ. ನರಸಿಂಹಮೂರ್ತಿ, ಪ್ರಜಾವಾಣಿ, 2011

ಗೌರವ ಪ್ರಶಸ್ತಿ ಪುರಸ್ಕೃತರು

1) ಪ್ರಹ್ಲಾದ್ ಕುಳಲಿ, ಹಿರಿಯ ಪತ್ರಕರ್ತ, 2) ರಾಜಾರಾವ್, ಹಿರಿಯ ಪತ್ರಕರ್ತ, 3) ಸಿ.ಜಿ. ಹಂಪಣ್ಣನವರ್, ಹಿರಿಯ ಪತ್ರಕರ್ತ, 4) ಜಿ.ಕೆ. ಸತ್ಯ, ಹಿರಿಯ ಪತ್ರಕರ್ತ, 5) ಯು.ಬಿ. ರಾಜಲಕ್ಷ್ಮಿ, ಹಿರಿಯ ಪತ್ರಕರ್ತ, 6) ಅಬ್ದುಲ್ ಹಫೀಜ್, ಛಾಯಾಚಿತ್ರಗಾರ, 7) ಬಿ. ಶಾಂತಾರಾಂ, ಹಿರಿಯ ಪತ್ರಕರ್ತ, ಹೊಸದಿಗಂತ, 8) ಈಶ್ವರ್ ಶೆಟ್ಟರ್, ಹಿರಿಯ ಪತ್ರಕರ್ತ, ಉದಯ ಟಿ.ವಿ., 9) ಬಿ.ಪಿ. ಮಲ್ಲಪ್ಪ, ಮುಖ್ಯ ವರದಿಗಾರ, ಸಂಜೆ ವಾಣಿ, 10) ಶ್ರೀಕಾಂತಾಚಾರ್ ಮಣ್ಣೂರು, ಹಿರಿಯ ಪತ್ರಕರ್ತ, ಗುಲ್ಬರ್ಗಾ, 11) ಅರುಣ್‌ಕುಮಾರ್ ಹಬ್ಬೂರ್, ಹಿರಿಯ ಪತ್ರಕರ್ತ, 12) ಬಾಲಕೃಷ್ಣ ಪುತ್ತಿಗೆ, ಮುಖ್ಯ ವರದಿಗಾರ, ಪ್ರಜಾವಾಣಿ, 13) ಎಚ್.ಎಸ್. ಪುಟ್ಟಸ್ವಾಮಿ, ಹಿರೇಮಗಳೂರು ವರದಿಗಾರ, ವಿಜಯ ಕರ್ನಾಟಕ, 14) ಸುಂದರ್ ಕೆ. ಜನಶ್ರೀ ವಾಹಿನಿ, 15) ಯು.ವಿ. ಜಾರ್ಜ್ ಹಿರಿಯ ಪತ್ರಕರ್ತ, 16) ಲಕ್ಷಣ್ ಕೊಡಸೆ, ಹಿರಿಯ ಪತ್ರಕರ್ತ, 17) ದಿನೇಶ್ ಅಮೀನ್ ಮಟ್ಟು , ಸಹಾಯಕ ಸಂಪಾದಕ, ಪ್ರಜಾವಾಣಿ, 18) ಸಂಗಮ್‌ದೇವ್, ಹಿರಿಯ ಪತ್ರಕರ್ತ, 19) ರುದ್ರಣ್ಣ ಹರ್ತಿಕೋಟೆ, ಹಿರಿಯ ಪತ್ರಕರ್ತ, 20) ವಿಜಯಲಕ್ಷ್ಮೀ ಶಿಬರೂರು, ಸುವರ್ಣ ಟಿವಿ,21) ಶಮಂತ, ಪತ್ರಕರ್ತ, 22) ರೇಚಾ ರೇವಡಿಗರ, ಹಿರಿಯ ಪತ್ರಕರ್ತ, 23) ಎಸ್.ಕೆ. ಕೊನೆಸಾಗರ, ಹಿರಿಯ ಪತ್ರಕರ್ತ, 24) ರವೀಂದ್ರ ಭಟ್ಟ, ಐನಕೈ , ಹಿರಿಯ ಪತ್ರಕರ್ತ, 25) ಅಂ.ಶಿ. ಪ್ರಸನ್ನಕುಮಾರ್, ಹಿರಿಯ ವಿಶೇಷ ವರದಿಗಾರ, ಕನ್ನಡ ಪ್ರಭ, 26) ವಿ.ಜಿ. ನರೇಂದ್ರ, ಹಿರಿಯ ವ್ಯಂಗ್ಯ ಚಿತ್ರಕಾರ, 27) ರಂಗನಾಥ್ ಭಾರದ್ವಾಜ್, ಸುವರ್ಣ ವಾಹಿನಿ, 28) ಡಿ.ಎಸ್. ಕುಲಕರ್ಣಿ, ಹಿರಿಯ ಪತ್ರಕರ್ತ, 29) ಕೆ.ವಿ. ಪ್ರಬಾಕರ್, ಮುಖ್ಯ ವರದಿಗಾರ, ಕನ್ನಡ ಪ್ರಭ, 30) ಕೆ.ಎಂ. ಶಿವರಾಜ್, ಹಿರಿಯ ಪತ್ರಕರ್ತ, ಮೈಸೂರು ಮಿತ್ರ, 31) ಆರ್.ಟಿ. ವಿಠಲಮೂರ್ತಿ, ಹಿರಿಯ ಪತ್ರಕರ್ತ, ಆಂದೋಲನ, 32) ನಟರಾಜ್, ಉದಯ ವಾಹಿನಿ, 33) ಪಾರ್ವತಿ ಮೆನನ್, ಹಿರಿಯ ಪತ್ರಕರ್ತ, ದಿ ಹಿಂದೂ, 34) ರೆಹಮಾನ್, ಟಿ.ವಿ.9, 35) ಟಿ.ಎಂ. ಸತೀಶ್, ಹಿರಿಯ ಪತ್ರಕರ್ತ, 36) ಜೆ.ಬಿ. ಶ್ಯಾಮಸುಂದರ, ಹಿರಿಯ ಪತ್ರಕರ್ತ, 37) ಸಿ. ಸೀತಾರಾಂ, ಹಿರಿಯ ಪತ್ರಕರ್ತ, 38) ಕೆ.ಬಿ. ಪಾಟೀಲ ಕುಲಕರ್ಣಿ, ಹಿರಿಯ ಪತ್ರಕರ್ತ.

English summary
Karnataka Madhyama Academy has announced awards for the year 2010 and 2011. The awards were announced by academy president DP Parameshwar on November 03. Congratulations to all the print and electronic media journalists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X