ಕನಿಮೋಳಿ ಜಾಮೀನು ಅರ್ಜಿ ವಜಾ, ಮತ್ತೆ ಜೈಲಿಗೆ

ಗುರುವಾರದಂದು(ನ.3) ಕನಿಮೋಳಿ ಹಾಗೂ ಇತರೆ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಲಾಯಿತು. ಜಾಮೀನು ಅರ್ಜಿ ವಜಾಗೊಳಿಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿ, ನ.11ಕ್ಕೆ ವಿಚಾರಣೆಯನ್ನು ಮುಂಡೂಡಿದೆ.
ಕನಿಮೋಳಿ ಪತಿ ಹಾಗೂ ಮಗನೊಂದಿಗೆ ಡಿಎಂಕೆ ಪಕ್ಷದ ಪ್ರಮುಖ ಮುಖಂಡರು ವಿಚಾರಣೆ ನೋಡಲು ಕೋರ್ಟ್ ಗೆ ಆಗಮಿಸಿದ್ದು. ಕನಿಮೋಳಿ ಜಾಮೀನು ನೀಡಲು ಸಿಬಿಐ ಕೂಡಾ ಆಕ್ಷೇಪ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಇಂದು ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಡಿಎಂಕೆ ನಾಯಕರಿಗೆ ಭಾರಿ ನಿರಾಸೆಯಾಗಿದೆ.
ಕನಿಮೋಳಿ ಜೊತೆಗೆ ಸ್ವಾನ್ ಟೆಲಿಕಾಂನ ಶಹೀದ್ ಉಸ್ಮಾನ್ ಬಾಲ್ವಾ, ಮಾಜಿ ಟೆಲಿಕಾಂ ಸಚಿವ ಎ ರಾಜಾ ಅವರ ಖಾಸಗಿ ಕಾರ್ಯದರ್ಶಿ ಆರ್ಕೆ ಚಂಡೋಲಿಯಾ, ಕಲೈಂಗರ್ ಟಿವಿ ಎಂಡಿ ಶರದ್ ಕುಮಾರ್, ಕುಸೆಗಾನ್ ಫ್ರೂಟ್ಸ್ ಹಾಗೂ ವೆಜಿಟೇಬಲ್ಸ್ ಮಾಲೀಕರಾಅದ ಆಸಿಫ್ ಬಲ್ವಾ ಹಾಗೂ ರಾಜೀವ್ ಅಗರವಾಲ್, ಬಾಲಿವುಡ್ ನಿರ್ಮಾಪಕ, ಶಾರುಖ್ ಖಾನ್ ಆಪ್ತ ಕರೀಂ ಮೊರಾನಿ ಅವರ ಜಾಮೀನು ಅರ್ಜಿ ಕೂಡಾ ವಜಾಗೊಂಡಿದೆ. ಇವರೆಲ್ಲರ ನ.11ರಂದು ಭವಿಷ್ಯ ತಿಳಿಯಲಿದೆ.












Click it and Unblock the Notifications