ನ.30ರಂದು ಬಿ. ಶ್ರೀರಾಮುಲು ಸ್ಥಾನಕ್ಕೆ ಚುನಾವಣೆ

ನ.30ಕ್ಕೆ ಮತದಾನ ನಡೆಯಲಿದ್ದು, ಡಿ.4ಕ್ಕೆ ಫಲಿತಾಂಶ ಹೊರಬೀಳಲಿದೆ.ನ.11ರೊಳಗೆ ನಾಮಪತ್ರ ಸಲ್ಲಿಸಲು ಕೊನೆ ದಿನಾಂಕ ಎಂದು ಆಯೋಗದ ಪ್ರಕಟಣೆ ಹೇಳುತ್ತಿದೆ.
ನಿಯಮಗಳ ಪ್ರಕರ ಶ್ರೀರಾಮುಲು ಅವರ ರಾಜೀನಾಮೆ ಅಂಗೀಕಾರವಾದ ಆರು ತಿಂಗಳೊಳಗೆ ಚುನಾವಣೆ ನಡೆಯಬೇಕು. ಆದರೆ, ಸ್ಪೀಕರ್ ಬೋಪಯ್ಯ ಅವರು ರಾಜೀನಾಮೆ ಅಂಗೀಕರಿಸಲು ಮೀನಾ ಮೇಷ ಎಣಿಸಿ ಕೊನೆಗೂ ರಾಜೀನಾಮೆ ಅಂಗೀಕರಿಸಿದ್ದಾರೆ.
ಶ್ರೀರಾಮುಲು ರಾಜೀನಾಮೆ ಅಂಗೀಕರಿಸಿ ಒಂದೂವರೆ ತಿಂಗಳಲ್ಲೇ ಚುನಾವಣೆ ಘೋಷಣೆಯಾಗಿರುವುದು ಅಚ್ಚರಿಯಾಗಿದೆ ಹಾಗೂ ಎಲ್ಲಾ ಪಕ್ಷಗಳಿಗೂ ತಲೆನೋವಾಗಿ ಪರಿಣಮಿಸಿದೆ.
ತರಾತುರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಹಾಗೂ ಗೆಲುವಿನ ತಂತ್ರಗಾರಿಕೆ ಹೆಣೆಯುವಲ್ಲಿ ಎಲ್ಲಾ ಪಕ್ಷಗಳು ನಿರತವಾಗಿದೆ.












Click it and Unblock the Notifications