ವಿಶ್ವದ 700 ಕೋಟಿ ಮಗು ನರ್ಗಿಸ್ ಗೆ ಅಭಿನಂದನೆ
ಲಖನೌ,
ಅ. 31 : ಕಾರ್ತೀಕ ಶುಕ್ಲ ಪಂಚಮಿಯ ಬೆಳಿಗ್ಗೆ 7.20ಕ್ಕೆ ವಿಶ್ವದ ಜನಸಂಖ್ಯೆ 700 ಕೋಟಿ ತಲುಪಿದೆ. ಈ ವಿಶ್ವ ದಾಖಲೆಯನ್ನು ಬರೆದ ಮಗು 'ನರ್ಗಿಸ್' ಹುಟ್ಟಿದ್ದು ಜನಸಂಖ್ಯೆಯಲ್ಲಿ ವಿಶ್ವದಾಖಲೆ (121 ಕೋಟಿ) ಬರೆಯುತ್ತಿರುವ ಭಾರತದ ಉತ್ತರ ಪ್ರದೇಶದ ಮಲ್ಲಿಯಾಹಾಬಾದ್ ಎಂಬ ಗ್ರಾಮದಲ್ಲಿ. ಎಂಥ ಕಾಕತಾಳೀಯ! id="toptextpromo">700
ಕೋಟಿಯ ಮಗು ಎಂದು ವಿಶ್ವಸಂಸ್ಥೆಯೇ ಘೋಷಿಸಿದ ಈ ಮಗು ಹುಟ್ಟಿದ್ದು ಅಜಯ್ ಕುಮಾರ್ ಮತ್ತು ವಿನಿತಾ ಎಂಬ ದಂಪತಿಗಳಿಗೆ. ಮಗು ಹುಟ್ಟಿದ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಇರುವ ಸರಕಾರೇತರ ಸಂಸ್ಥೆ ಪ್ಯಾನ್ ಇಂಡಿಯಾ ಸಣ್ಣ ಕಾರ್ಯಕ್ರಮ ಆಯೋಜಿಸಿ ದಂಪತಿ ಮತ್ತು ಮಗುವನ್ನು ಅಭಿನಂದಿಸಿದವು. id='are-slot-1' class='oiad oi-axt oiadv'> id='top-searched-articles'>ಮಗು
ಹುಟ್ಟಿದ್ದು ಮನಿಲಾಸ್ ಜೋಸ್ ಫೇಬಲ್ಲಾ ಮೆಮೋರಿಯಲ್ ಹಾಸ್ಪಿಟಲ್ ನಲ್ಲಿ. ಆ ವೇಳೆಗಾಗಲೆ ಮಾಧ್ಯಮದವರು ಮತ್ತು ನೂರಾರು ಕ್ಯಾಮೆರಾ ಫ್ಲಾಷ್ ಗಳು ಆ ಸಂಭ್ರಮಕ್ಕೆ ಸಜ್ಜಾಗಿದ್ದವು. ಹೆಣ್ಣು ಭ್ರೂಣಗಳ ಹತ್ಯೆ, ಮಹಿಳೆಯರ ಮೇಲೆ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿರುವ ಈ ಸಂದರ್ಭದಲ್ಲಿ 700 ಕೋಟಿಯ ಮಗುವಾಗಿ ಹುಟ್ಟಿದ್ದು ಹೆಣ್ಣುಮಗುವಾಗಿದ್ದು ನಿಜಕ್ಕೂ ವಿಸ್ಮಯ.











Click it and Unblock the Notifications